ಬೆಂಗಳೂರು : ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜು ಆವರಣದಲ್ಲಿ ಕಾರ್ಪೋರೇಟರ್ ಮಗಳ ಹತ್ಯೆ ಪ್ರಕರಣ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಸರ್ಕಾರದ ನಡುವಿನ ಕಿತ್ತಾಟಕ್ಕೂ ನಾಂದಿಯಾಡಿದೆ. ರಾಜ್ಯದಲ್ಲಿ ಮತ್ತೆ “ಲವ್- ಜಿಹಾದ್” ಪ್ರಕರಣಗಳು ಮರುಕಳಿಸುತ್ತಿದೆ ಅಂತ ವಿಪಕ್ಷ ನಾಯಕರು ಸರ್ಕಾರದ ವಿರುದ್ದ ಸಿಡಿದೆದ್ದಿದ್ದಾರೆ.
ಆಡಳಿತರೂಢ ಸರ್ಕಾರದ ಮೇಲೆ ಮೈತ್ರಿ ನಾಯಕರು ಕೆಂಡಮಂಡಲರಾಗಿದ್ದಾರೆ. ನೇಹಾ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್. ಗೃಹಸಚಿವ ಪರಮೇಶ್ವರ್ ಒಂದೊಂದು ಆದೇಶ ನೀಡ್ತಾರೆ. ಯಾವುದು ಪಾಲಿಸ್ಬೇಕು. ಕಾನೂನು ಸುವ್ಯವಸ್ಥೆ ಮೇಲೆ ಅವರಿಗೆ ಹಿಡಿತ ಇಲ್ಲ. ಹೀಗಾಗಿ ತಕ್ಷಣ ಗೃಹಸಚಿವ ಡಾ.ಜಿ ಪರಮೇಶ್ವರ್ ರಾಜೀನಾಮೆ ಕೊಡ್ಬೇಕು ಅಂತ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಕಿಡಿ ಕಾರಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡ್ಬೇಕು ಅಂತ ಪಟ್ಟು ಹಿಡಿದಿದ್ದಾರೆ.
ಇದೀಗ ಕಾಂಗ್ರೆಸ್ ನಾಯಕ ಹೇಳಿಕೆಗೆ ಆಕ್ರೋಶ ಹೊರಹಾಕಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. 4 ಘಟನೆಗಳಿಂದ ಇಡೀ ರಾಜ್ಯ ದಿಕ್ಕೆಟ್ಟು ಹೋಗಿದೆ.ಹುಬ್ಬಳ್ಳಿಯಲ್ಲಿ ನಡೆದ ನೇಹಾ ಪ್ರಕರಣವೊಂದೇ ಅಲ್ಲ. ನಿನ್ನೆ ಒಂದೇ ದಿನ 8 ಕೊಲೆಗಳಾಗಿವೆ. R.T ನಗರದಲ್ಲಿ ಹಗಳಿನಲ್ಲೇ ತಲ್ವಾರ್ ಹಿಡಿದುಕೊಂಡು ಓಡಾಡ್ತಾರೆ ಇದಕ್ಕೆ ಯಾರು ಜವಾಬ್ದಾರಿ.ಲವ್ ಜಿಹಾದ್ ಒಂದು ಷಡ್ಯಂತ್ರ NIA ತನಿಖೆ ಆಗಬೇಕು. ವೋಟಿಗಾಗಿ ಮುಸ್ಲಿಮರನ್ನು ಇಷ್ಟೊಂದು ಓಲೈಕೆ ಮಾಡಿದರೇ ಹೇಗೆ? ಎಂದು ಪರಮೇಶ್ವರ್ ವಿರುದ್ಧ ಶೋಭಾ ಕರಂದ್ಲಾಜೆ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರೇ ಹುಬ್ಬಳ್ಳಿ ಘಟನೆಯನ್ನು ತಿರುಚಬೇಡಿ. ಲವ್ ಜಿಹಾದ್ ಪ್ರಕರಣ ಅಂತಾ ಪೋಷಕರೇ ಹೇಳ್ತಿದ್ದಾರೆ. ಪೋಷಕರ ನೋವನ್ನು ಅರ್ಥ ಮಾಡಿಕೊಳ್ಳಿ, ತಿರುಚಬೇಡಿ. ಮೊದಲಿನಿಂದಲೂ ಲವ್ ಜಿಹಾದ್ ಬಗ್ಗೆ ಎಚ್ಚರಿಸಿಕೊಂಡು ಬರ್ತಿದ್ದೇವೆ.ಈ ಸರ್ಕಾರ ಆಡಳಿತ ವ್ಯವಸ್ಥೆಯನ್ನು ಡಾನ್ಗಳ ಕೈಗೆ ಕೊಟ್ಟಿದೆಯಾ..? ಎಂದು ಪ್ರಶ್ನಿಸಿದ್ದಾರೆ. ಲವ್ ಜಿಹಾದ್ ನಡೆಸುವವರಿಗೆ ಈ ಸರ್ಕಾರ ಪಾಸ್ಪೋರ್ಟ್ ಕೊಟ್ಟಿದೆ. ಕರ್ನಾಟಕದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ವಾ..? ಬೆಳಗಾವಿಯಲ್ಲಿ ಏನಾಯ್ತು..? ಬೆಂಗಳೂರಿನ ಹನುಮಾನ್ ಚಾಲಿಸಾ ಕೇಸ್ ಏನಾಯ್ತು..?ಶಿವಮೊಗ್ಗದಲ್ಲಿ ಫ್ಲೆಕ್ಸ್ ವಿಚಾರಕ್ಕೆ ದೊಡ್ಡ ಮಟ್ಟದ ಗಲಾಟೆ ಆಯ್ತು. ಹಿಂದೂ ವಿರೋಧಿ ಸರ್ಕಾರ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ..? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಲವ್ ಮಾಡಿ ಮತಾಂತರ ಮಾಡುವುದಕ್ಕೆ ಮುಂದಾಗಿದ್ದನು. ಲವ್ ಜಿಹಾದ್ ಯಶಸ್ವಿಯಾಗಲಿಲ್ಲ ಅಂತ ಹತ್ಯೆಗೈದಿದ್ದಾನೆ. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತೋ ಹೀಗೆ ಕೊಲೆಗಳಾಗುತ್ತವೆ. ISISಮಾದರಿಯಲ್ಲೇ ಯುವತಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಚಾಕು ಹಾಕಲು ಆರೋಪಿ ಎಲ್ಲೋ ತರಬೇತಿ ಪಡೆದಿದ್ದಾನೆ ಕಾಂಗ್ರೆಸ್ ಬೆಳೆಸಿದ ವಿಷ ಬೀಜವಿದು. ಸಿಎಂಗೆ ನಿಜವಾದ ಕಾಳಜಿ ಇದ್ದರೆ ಕೊಲೆಗಾರನ ಎನ್ಕೌಂಟರ್ ಮಾಡಿಸಬೇಕಿತ್ತು, ಜಮಾತೆ ಇಸ್ಲಾಮಿನವರು ಕೂಡಲೆ ಫತ್ವಾ ಹೊರಡಿಸಿ ಮನೆ ಬಹಿಷ್ಕರಿಸಬೇಕು,ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ರಾಜ್ಯವನ್ನು ಬಲಿ ಕೊಡ್ತಿದೆ. ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಹಿಂದೂಗಳಲ್ಲಿ ಭೀತಿ ಸೃಷ್ಟಿಸಲಾಗ್ತಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯನ್ನು ಚುಚ್ಚಿ ಸಾಯಿಸಲಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗ್ತಾರೆ. ರಾಮನವಮಿಯಂದು ಜೈ ಶ್ರೀರಾಮ್ ಘೋಷಣೆ ಕೂಗಬೇಡಿ ಎಂತಾರೆ. ಮೈಸೂರಿನಲ್ಲಿ ಮೋದಿ ಬಗ್ಗೆ ಹಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸ್ತಾರೆ. ಮಂಡ್ಯದ ಕೆರಗೂಡಿನಲ್ಲಿ ಹನುಮ ಧ್ವಜ ಇಳಿಸ್ತಾರೆ. ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹೊಡಿತಾರೆ. ರಾಜ್ಯದಲ್ಲಿ ಹಿಂದೂಗಳು ಬದುಕುವ ಹಾಗೇ ಇಲ್ವಾ ? ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು-ಸಾಲು ಆರೋಪ ಮಾಡಿದ್ದಾರೆ.
ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಕರ್ನಾಟಕದ ಪಾʻಕೈʼಸ್ತಾನ್ ಸರ್ಕಾರದಿಂದ ತಾಲಿಬಾನ್ ಮಾಡೆಲ್. ಜೈ ಶ್ರೀರಾಮ್ ಎಂದರೆ ಬ್ರದರ್ಸ್‌ಗಳಿಂದ ಹಲ್ಲೆ. ಲವ್ ಜಿಹಾದ್‌ಗೆ ಒಪ್ಪದೆ ಇದ್ದರೆ ಬರ್ಬರ ಕೊಲೆ. ಒಡೆಯರ್ ಪರ ನಿಂತರೆ ಕಾರು ಹರಿಸಿ ಕೊಲೆ. ಡ್ರಾಪ್ ಕೊಟ್ಟರೆ ಮತಾಂಧರಿಂದ ಹಿಗ್ಗಾಮುಗ್ಗಾ ಥಳಿತ. ಚುನಾವಣೆ ವೇಳೆ ಜಿಹಾದಿ ಮತಾಂಧ ಬ್ರದರ್ಸ್‌ಗಳನ್ನು ಮೆರೆಸುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಆ ದಿನಗಳ ಕೊತ್ವಾಲ್ ಶಿಷ್ಯ ಬೆದರಿಸುತ್ತಿದ್ದಾರೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹಾದಿ-ಬೀದಿಯಲ್ಲಿ ಬೆದರಿಸುತ್ತಿದ್ದಾರೆ. ರಾಹುಲ್ ಗಾಂಧಿ ರಾಜ್ಯವನ್ನು ದ್ವೇಷದ ಅಂಗಡಿ ಮತಾಂಧರ ಗಲಭೆಯ ತೋಟವಾಗಿಸಿದ್ದಾರೆ ಎಂದು ಟ್ವೀಟ್ನಲ್ಲಿ ಆಕ್ರೋಶ ಹೊರಕಾಕಿದ್ದಾರೆ.
ನೇಹಾ ಹತ್ಯೆ ಪ್ರಕರಣ ಸಂಬಂಧ ಹುಬ್ಬಳ್ಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿ, ರಾಜ್ಯದಲ್ಲಿ ಮಾಸ್ ಮರ್ಡರ್ಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕಾಂಗ್ರೆಸ್ ಅವಧಿಯಲ್ಲಿ ಹದಗೆಟ್ಟಿದೆ. ಹೀಗೇ ಬಿಟ್ಟರೆ ಬಿಹಾರದ ಮಾದರಿಯ ಪರಿಸ್ಥಿತಿ ನಿರ್ಮಾಣ ಆಗುತ್ತೆ.ಕಾಲೇಜು ಕ್ಯಾಂಪಸ್‌ನಲ್ಲಿ ಹಾಡಹಗಲೇ ಕೊಲೆ ಮಾಡಲಾಗಿದೆ. ಗದಗದಲ್ಲೂ ನಿನ್ನೆ ನಾಲ್ವರ ಮರ್ಡರ್ ಆಗಿದೆ. ರೌಡಿಗಳಿಗೆ, ಗೂಂಡಾಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ. ಸಿಎಂ ಒಂದು ಟ್ವೀಟ್ ಮಾಡಿದರೆ ಜವಾಬ್ದಾರಿ ಮುಗಿದಂತಲ್ಲ. ಇಂತಹ ಶಕ್ತಿಗಳಿಗೆ ಬೆಂಬಲ ಕೊಡೋದನ್ನು ನಿಯಂತ್ರಿಸಬೇಕು ಅಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೆಂಡಮಂಡಲರಾಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಬೃಹತ್ ಐಟಿ ರೇಡ್ : ಚುನಾವಣೆಗೆ ಹಣ ಸಾಗಾಟ ಮಾಹಿತಿ ಹಿನ್ನೆಲೆ ಸುಮಾರು 60ಕ್ಕೂ ಹೆಚ್ಚು ಕಡೆ ದಾಳಿ..!
Post Views: 67