ಬೆಂಗಳೂರು : ಕ್ಷಣ ಕಳೆಯುವಷ್ಟರಲ್ಲಿ 2025ರ ಹೊಸ ವರ್ಷ ಬಂದೇ ಬಿಟ್ಟಿದೆ. ಅದರಲ್ಲೂ ಬೆಂಗಳೂರಿನ ಜನ ಅದ್ಧೂರಿಯಾಗಿ ಹೊಸ ವರ್ಷವನ್ನ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಕೋರಮಂಗಲದ ಸ್ಟ್ರೀಟ್‌ನಲ್ಲಿ ಸಂಭ್ರಮಾಚರಣೆ ಜೋಶ್‌ನಲ್ಲಿ ಯುವಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.
ಯುವಕನ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆ ಕಪಾಳಕ್ಕೆ ಬಾರಿಸಿದ್ದಾರೆ. ಅಲ್ಲದೇ ಯುವಕನನ್ನ ಹಿಡಿದು ದಬ್ಬಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕ ಜಾಗ ಖಾಲಿ ಮಾಡಿದ್ದಾನೆ.
ಹೊಸ ವರ್ಷಕ್ಕೆ ಭಾರತ ಕಾಲಿಟ್ಟಿದ್ದು, ಕರ್ನಾಟಕ ಜನತೆ 2025ನ್ನು ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿ ಸ್ವಾಗತಿಸಿದ್ದಾರೆ. ಬೆಂಗಳೂರಿನಲ್ಲಿ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚಿವೆ.
ಇದನ್ನೂ ಓದಿ : ಹೊಸ ವರ್ಷ 2025ರ ಮೊದಲ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ..!