Download Our App

Follow us

Home » ರಾಷ್ಟ್ರೀಯ » ನಮೋ 3.0 ಬಜೆಟ್​ನಲ್ಲಿ ಆದಾಯ ತೆರಿಗೆ ಏರಿಕೆನಾ? ಇಳಿಕೆನಾ? – ಇಲ್ಲಿದೆ ಮಾಹಿತಿ..!

ನಮೋ 3.0 ಬಜೆಟ್​ನಲ್ಲಿ ಆದಾಯ ತೆರಿಗೆ ಏರಿಕೆನಾ? ಇಳಿಕೆನಾ? – ಇಲ್ಲಿದೆ ಮಾಹಿತಿ..!

ನವದೆಹಲಿ : ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆ ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸಂಬಳ ಪಡೆಯುವ ಮಧ್ಯಮ ವರ್ಗದ ಜನತೆಗೆ ರಿಲೀಫ್ ನೀಡಲಾಗಿದೆ. ಹೊಸ ತೆರಿಗೆ ಪದ್ದತಿ ಪ್ರಕಾರ, ಈಗ 3 ಲಕ್ಷದಿಂದ 7 ಲಕ್ಷ ರೂಪಾಯಿ ಆದಾಯದ ಮೇಲೆ ಶೇ.5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹೊಸ ತೆರಿಗೆ ಅನ್ವಯ 50 ಸಾವಿರ ಬದಲಾಗಿ 75 ಸಾವಿರ ರೂಪಾಯಿ ಸ್ಟಾಂಡರ್ಟ್ ಡಿಡಕ್ಷನ್ ಸಿಗಲಿದೆ. ಈ ಎರಡೂ ತೆರಿಗೆಯ ಬದಲಾವಣೆಯಿಂದಾಗಿ ತೆರಿಗೆದಾರರಿಗೆ 17,500 ರೂಪಾಯಿ ಉಳಿತಾಯವಾಗಲಿದೆ. ಆದರೆ ಹಳೆ ತೆರಿಗೆ ಸ್ಲಾಬ್‌ನಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆಯನ್ನು ತಂದಿಲ್ಲ.

ಹೊಸ ತೆರಿಗೆ ಸ್ಲ್ಯಾಬ್‌ಗಳು :

  • 3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
  • 3 ಲಕ್ಷದಿಂದ 7 ಲಕ್ಷದವರೆಗಿನ ಆದಾಯಕ್ಕೆ ಶೇ.5 ತೆರಿಗೆ
  • 7 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.10 ತೆರಿಗೆ
  • 10 ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ.15 ತೆರಿಗೆ
  • 12 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ.20 ತೆರಿಗೆ
  • 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 30% ತೆರಿಗೆ

ಹಳೆ ತೆರಿಗೆಯಲ್ಲಿ ನಾಲ್ಕು ಹಂತಗಳು. ಶೇ.30ರಷ್ಟು ಟ್ಯಾಕ್ಸ್ 

  • 2.5 ಲಕ್ಷವರೆಗೆ : 0 ತೆರಿಗೆ ಇಲ್ಲ
  • 2.5 ಲಕ್ಷದಿಂದ 5 ಲಕ್ಷ ರೂ.ವರೆಗೆ :  ಶೇ.5 (12,500 ರೂಪಾಯಿ)
  • 5 ಲಕ್ಷದಿಂದ 10 ಲಕ್ಷ ರೂ.ವರೆಗೆ : ಶೇ.20 (1,12,500 ರೂ) ಇದು 5 ಲಕ್ಷಕ್ಕೆ 15,500 ರೂ. ಮತ್ತು ಇನ್ನುಳಿದ ಮೊತ್ತದ ಮೇಲೆ 1,00,000 ರೂ.ಸೇರುತ್ತದೆ. ಹಾಗಾಗಿ ಒಟ್ಟು ತೆರಿಗೆ 1,12,500 ರೂಪಾಯಿ ಆಗುತ್ತದೆ)
  • 10 ಲಕ್ಷ ರೂಪಾಯಿಗೂ ಅಧಿಕ : ಶೇ.30 (1,12,500 ರೂಪಾಯಿ ಅಧಿಕ ಆಗುತ್ತೆ)

ಇದನ್ನೂ ಓದಿ : ಬಜೆಟ್​​ನಲ್ಲಿ ಮಹಿಳೆಯರು, ಬಾಲಕಿಯರಿಗೆ 3 ಲಕ್ಷ ಕೋಟಿಗೂ ಹೆಚ್ಚು ಹಣ ಮೀಸಲು..!

 

Leave a Comment

DG Ad

RELATED LATEST NEWS

Top Headlines

ಹೊಸ ವರ್ಷದಂದೇ ನೇಣು ಬಿಗಿದು ಯುವತಿ ಆತ್ಮಹತ್ಯೆ..!

ಬೆಂಗಳೂರು : ಹೊಸ ವರ್ಷದಂದೇ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ರುಚಿತಾ ಆತ್ಮಹತ್ಯೆಗೆ ಶರಣಾದ ಯುವತಿ.

Live Cricket

Add Your Heading Text Here