ದಾವಣಗೆರೆ : ಸಿಎಂ ಸಿದ್ದರಾಮಯ್ಯ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದ ಸಿದ್ದು ಆಪ್ತ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ ಆಕ್ರೋಶ ಹೊರಹಾಕಿದ್ದಾರೆ.
ಇನ್ನೊಮ್ಮೆ ಏಕವಚನದಲ್ಲಿ ಮಾತ್ನಾಡಿದ್ರೆ ಮೆಟ್ನಲ್ಲಿ ಹೊಡೀತೀನಿ. ಸಿಎಂ, ಡಿಸಿಎಂ, ಕಾಂಗ್ರೆಸ್ ಬಗ್ಗೆ ಏಕವಚನ ಬಳಸಿದ್ರೆ ಸುಮ್ಮನಿರಲ್ಲ ಎಂದು ಬಿಜೆಪಿ MP ವಿರುದ್ಧ ಮಾಜಿ ಶಾಸಕ ಎಸ್. ರಾಮಪ್ಪ ಕಿಡಿಕಾರಿದ್ದಾರೆ.
ಇಷ್ಟು ದಿನ ನೆಲ ಕಚ್ಚಿದ್ದ ಹೆಗಡೆ ದೇವರ ದಯದಿಂದ ಬದುಕಿದ್ದಾನೆ. ಈಗ ಸಿದ್ದರಾಮಯ್ಯ ನವರಿಗೆ ಹೀಗೆ ಮಾತನಾಡಿದ್ರೆ ಸರಿ ಇರೋದಿಲ್ಲ. ಹಿಂದುತ್ವ ಬಿಜೆಪಿ ಅಪ್ಪನ ಸ್ವತ್ತಾ..? ನಾವೂ ಹಿಂದೂಗಳೇ.. ಎಲ್ಲಾ ಧರ್ಮಗಳು ಒಂದಾಗಿ ಬಾಳಬೇಕು ಅನ್ನೋದು ನಮ್ಮ ಆಸೆ ಎಂದು ಅನಂತ ಕುಮಾರ್ ಹೆಗಡೆಗೆ ಏಕವಚನದಲ್ಲೇ ರಾಮಪ್ಪ ತಿರುಗೇಟು ಕೊಟ್ಟಿದ್ದಾರೆ.
ಅನಂತ್ ಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೇನು? ಅಯೋಧ್ಯಾ ವಿಚಾರವಾಗಿ ಅಪಸ್ವರ ಎತ್ತುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಅನಂತ್ ಕುಮಾರ್ ಹೆಗಡೆ ಟಾಂಗ್ ಕೊಟ್ಟಿದ್ದರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ವಿಟೇಷನ್ ನಮಗೆ ಬಂದಿಲ್ಲ ಅಂತ ಸಿದ್ದರಾಮಯ್ಯ ಹೇಳ್ತಾರೆ. ಆಮೇಲೆ ನಾನು ಹೋಗೋದಿಲ್ಲ ಅಂತಾರೆ. ನೀನು ಹೋಗು, ಬಿಡು, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಗೇ ಆಗುತ್ತೆ ಮಗ್ನೆ ಅಂತ ವ್ಯಂಗ್ಯವಾಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ : ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್..