ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು.
ಇದೀಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ತಪ್ಪು ಮಾಡಿಲ್ಲ.. ರಾಜೀನಾಮೆ ಕೊಡಲ್ಲ. ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಬಿಜೆಪಿ-ಜೆಡಿಎಸ್ ನಾಯಕರು ಸೇರಿ ಪಿತೂರಿ ಮಾಡಿದ್ದಾರೆ. ಇಂಥಾ ರಾಜಕೀಯ ಷಡ್ಯಂತ್ರಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ. ಈ ಹಿಂದೆ ಹಲವರ ವಿರುದ್ಧ ಪಿಟಿಷನ್ಗಳು ಹೋಗಿವೆ. ಹೆಚ್ಡಿಕೆ, ರೆಡ್ಡಿ, ಜೊಲ್ಲೆ ವಿರುದ್ಧ ದೂರು ಬಂದಿದ್ದವು.ಈ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಅರ್ಜಿ ಕೊಟ್ಟ ದಿನವೇ ನನಗೆ ನೋಟಿಸ್ ಬಂದಿತ್ತು. ನೋಟಿಸ್ ಬಂದ ದಿನವೇ ಇದೆಲ್ಲವನ್ನ ನಿರೀಕ್ಷಿಸಿದ್ದೆ. ರಾಜ್ಯಪಾಲರ ನಿರ್ಧಾರ ಕಾನೂನು ಬಾಹಿರವಾಗಿದೆ.ಹೈಕಮಾಂಡ್, ಸಚಿವರು, ಶಾಸಕರು ನನ್ನ ಜೊತೆಗಿದ್ದಾರೆ ಎಂದಿದ್ದಾರೆ.
ಇನ್ನು ಕಾನೂನು ಬಾಹಿರವಾದ ಕೆಲಸ ನಾನು ಮಾಡಿಲ್ಲ. ರಾಜಭವನದ ದುರ್ಬಳಕೆ ಮಾಡಲಾಗ್ತಿದೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ. ಸಂವಿಧಾನ ಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದು ಬೆಂಬಲಕ್ಕೆ ಬೆಂಗಳೂರಿಗೆ ಧಾವಿಸಿದ ಹೈಕಮಾಂಡ್..!