ಜಮ್ಮು-ಕಾಶ್ಮೀರ ವಿಧಾನಸಭೆ ಕಲಾಪದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಅಸೆಂಬ್ಲಿಯಲ್ಲಿ ಮತ್ತೆ ಆರ್ಟಿಕಲ್ 370 ಕಿಡಿ ಹೊತ್ತಿದ್ದು, ಬಿಜೆಪಿ ವರ್ಸಸ್ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆದಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆ ಸಂಬಂಧ ವಿಧಾನಸಭೆಯಲ್ಲಿ ನಿನ್ನೆ ನಿರ್ಣಯ ಮಂಡನೆಯಾಗಿದೆ. ವಿಶೇಷ ಸ್ಥಾನಮಾನ ಮರುಸ್ಥಾಪನೆ ವಿರೋಧಿಸಿ ಬಿಜೆಪಿ ಸದಸ್ಯರು ಗಲಾಟೆ ಮಾಡಿದ್ದಾರೆ. ನಿರ್ಣಯವನ್ನು ವಿತ್ ಡ್ರಾ ಮಾಡುವಂತೆ ಬಿಜೆಪಿ ಒತ್ತಾಯ ಮಾಡಿದೆ. ಇದೇ ವಿಚಾರದ ಗಲಾಟೆ ಇಂದು ಬೆಳಗ್ಗಿನ ಕಲಾಪಕ್ಕೂ ತಟ್ಟಿದೆ. ಬೆಳಗ್ಗೆ 10.20ಕ್ಕೆ ಕಲಾಪ ಆರಂಭವಾದರೂ ಬಿಜೆಪಿ ಶಾಸಕರ ಗದ್ದಲ ಮುಂದುವರಿದಿತ್ತು. ಹೀಗಾಗಿ ಸ್ಪೀಕರ್ ಕಲಾಪವನ್ನು ಮುಂದೂಡಿದ್ದಾರೆ.
ಇಂದು ಬೆಳಗ್ಗೆ ಶಾಸಕ ಶೇಖ್ ಖುರ್ಷಿದ್, ಜಮ್ಮುಕಾಶ್ಮೀರಕ್ಕೆ ಇದ್ದ 370ನೇ ವಿಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸುವ ಪೋಸ್ಟರ್ನೊಂದಿಗೆ ಸದನಕ್ಕೆ ತಲುಪಿದ್ದರು. ಇದನ್ನು ನೋಡಿದ ಬಿಜೆಪಿ ಸದಸ್ಯರು ಆಕ್ರೋಶಗೊಂಡು ಅವರ ಕೈಯಲ್ಲಿದ್ದ ಪೋಸ್ಟರ್ ಕಿತ್ತುಕೊಂಡಿದ್ದಾರೆ. ಈ ವೇಳೆ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಇದನ್ನೂ ಓದಿ : ಮುಡಾ ಕೇಸ್ – ಮಾಜಿ ಅಧ್ಯಕ್ಷ ಮರೀಗೌಡ ಸೇರಿ 7 ಮಂದಿಗೆ ED ನೋಟಿಸ್ ಜಾರಿ..!