ಮಡಿಕೇರಿ : ಪತಿಯೋರ್ವ ತನ್ನ ಪತ್ನಿಯನ್ನು ಗುಂಡಿಟ್ಟು ಕೊಂದ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ನಡೆದಿದೆ. 36 ವರ್ಷದ ಶಿಲ್ಪಾ ಮೃತದುರ್ದೈವಿ.
ಗಂಡ ಹೆಂಡತಿಯರ ಮಧ್ಯೆ ಜಗಳವಾಗಿದ್ದು, ನಂತರ ಗಂಡ ನಾಯಕಂಡ ಬೋಪಣ್ಣ ಕೋಪದಿಂದ ಕೋವಿಯಿಂದ ತನ್ನ ಹೆಂಡತಿ ಶಿಲ್ಪಾ ಸೀತಮ್ಮ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಪತಿ ಬೋಪಣ್ಣ ಹತ್ಯೆ ಮಾಡಿದ ಬಳಿಕ ಕೋವಿ ಸಮೇತ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನೂ, ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಘಟನೆಯ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆ..!
Post Views: 820