ಕಲಬುರಗಿ : ಹಗ್ಗದಿಂದ ಉಸಿರುಗಟ್ಟಿಸಿ ಬಳಿಕ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನೇ ಪತಿ ಭೀಕರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿ ನಡೆದಿದೆ.
42ವರ್ಷದ ನಾಗಮ್ಮ ಮೃತ ದುರ್ದೈವಿಯಾಗಿದ್ದು, ಕಳೆದ ರಾತ್ರಿ ಹೆಂಡತಿ ಸೆಕ್ಸ್ಗೆ ನಿರಾಕರಿಸಿದ್ದಕ್ಕೆ ಗಂಡ ಒತ್ತಾಯ ಮಾಡಿದ್ದನು. ಆದರೆ, ಗಂಡನ ಒತ್ತಾಯಕ್ಕೆ ಒಪ್ಪದ ಹಿನ್ನೆಲೆ ಪಾಪಿ ಪತಿ ಶೇಖಪ್ಪಾ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಸೆಕ್ಸ್ಗೆ ಒಪ್ಪಿಕೋ ಇಲ್ಲವಾದಲ್ಲಿ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಆವಾಜ್ ಹಾಕಿದ್ದಾನೆ. ನೋಡಣ ಕೊಚ್ಚಿ ಹಾಕೆಂದು ಪತ್ನಿ ಹೇಳಿದ ಕ್ಷಣವೇ ಕೊಡಲಿಯಿಂದ ಕೊಚ್ಚಿ ಹಾಕಿದ್ದಾನೆ. ಪತ್ನಿ ನಾಗಮ್ಮಳ ಹತ್ಯೆ ಮಾಡಿದ ಬಳಿಕ ಪತಿ ಶೇಖಪ್ಪಾ ನೇರವಾಗಿ ಬಂದು ಪೋಲಿಸ್ ಠಾಣೆಗೆ ಸರೇಂಡರ್ ಆಗಿದ್ದಾನೆ. ಈ ಕುರಿತು ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಿತ್ರದುರ್ಗ : ಶಾರ್ಟ್ ಸರ್ಕ್ಯೂಟ್ನಿಂದ ರಸ್ತೆ ಮಧ್ಯೆ ಹೊತ್ತಿ ಉರಿದ ಆಯಿಲ್ ತುಂಬಿದ್ದ ಕಂಟೇನರ್..!
Post Views: 176