Download Our App

Follow us

Home » ಮೆಟ್ರೋ » ಬೆಂಗಳೂರಲ್ಲಿ ಮುಂದುವರಿದ ವರುಣಾರ್ಭಟ – ಮಳೆ ಅಬ್ಬರಕ್ಕೆ ಹಲವೆಡೆ ಧರೆಗುರುಳಿದ ಬೃಹತ್​ ಮರಗಳು..!

ಬೆಂಗಳೂರಲ್ಲಿ ಮುಂದುವರಿದ ವರುಣಾರ್ಭಟ – ಮಳೆ ಅಬ್ಬರಕ್ಕೆ ಹಲವೆಡೆ ಧರೆಗುರುಳಿದ ಬೃಹತ್​ ಮರಗಳು..!

ಬೆಂಗಳೂರು : ಕರ್ನಾಟಕ ರಾಜಧಾನಿ ಬೆಂಗಳೂರು ಭಾರೀ ಮಳೆಗೆ ಅಕ್ಷರಶಃ ನಲುಗುತ್ತಿದೆ. ಸಂಜೆ ಸುರಿಯುತ್ತಿರೋ ವರ್ಷಧಾರೆಗೆ ಬೆಂಗಳೂರಿಗರು ತತ್ತರಿಸುತ್ತಿದ್ದರೇ, ಇನ್ನೊಂದೆಡೆ ಮಳೆ ಅಬ್ಬರಕ್ಕೆ ಹಲವೆಡೆ ಬೃಹತ್​ ಮರಗಳು ಧರೆಗುರುಳಿವೆ.

ಇಂದು ಸಂಜೆ ಸುರಿದ ಮಳೆ ಅಬ್ಬರಕ್ಕೆ ಮಲ್ಲೇಶ್ವರ 11ನೇ ಕ್ರಾಸ್​​ನಲ್ಲಿ ಧರಶಾಹಿಯಾದ ಬೃಹತ್​ ಮರವೊಂದು ಹಳ್ಳಿ ಮನೆ ಹೋಟೆಲ್ ಮೇಲೆ ಬಿದ್ದದೆ. ಅಷ್ಟೇ ಅಲ್ಲದೆ ಸತತ ಎರಡು ಗಂಟೆಯಿಂದ ಸುರಿಯುತ್ತಿರೋ ಭಾರೀ ಮಳೆ ಅರಮನೆ ರಸ್ತೆಗಳೆಲ್ಲ ಕೆರೆಯಂತಾಗಿದೆ.

ಮಳೆಯಿಂದಾಗಿ ಕಿಲೋ ಮೀಟರ್​ ಗಟ್ಟಲೆ ಟ್ರಾಫಿಕ್​ ಜಾಮ್ ಆಗಿದ್ದು, ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ. ಇನ್ನು ಮುಂದಿನ‌ ಮೂರು ಗಂಟೆಗಳ ಕಾಲ ಬೆಂಗಳೂರಿನಲ್ಲಿ‌ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಬೆಂಗಳೂರು ಹಾಗೂ  ಯೆಲ್ಲೋ ಅಲರ್ಟ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಯಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ಇನ್ನು ಚಿಕ್ಕಬಳ್ಳಾಪುರ, ಕೊಡಗು, ವಿಜಯಪುರಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಎಲ್ಲರೂ ಸುರಕ್ಷಿತ ಸ್ಥಳದಲ್ಲೇ ಇರುವಂತೆ ಹವಮಾನ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ : ಬಡ ಕುಟುಂಬದ ಕಥೆ ‘ಮೂಕ ಜೀವ’ ಚಿತ್ರ ಈ ವಾರ ತೆರೆಗೆ..!

Leave a Comment

DG Ad

RELATED LATEST NEWS

Top Headlines

ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ..!

ನವದೆಹಲಿ : ದೇಶದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಕೊನೆಯುಸಿರೆಳೆದಿದ್ದು, ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಡಿಸೆಂಬರ್ 28 ಅಂದರೆ ನಾಳೆ

Live Cricket

Add Your Heading Text Here