ಬೆಂಗಳೂರು : 131 ದಿನಗಳ ಜೈಲು ವಾಸದ ಬಳಿಕ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಆರು ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜಾಮೀನು ನೀಡಲಾಗಿದೆ. ಬುಧವಾರ ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದ ದರ್ಶನ್ ಅಲ್ಲಿಂದ ನೇರವಾಗಿ ಪತ್ನಿ ವಿಜಯಲಕ್ಷ್ಮಿ ಅವರ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಗುರುವಾರ ಮಗ ವಿನೀಶ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು, ದೀಪಾವಳಿ ಹಬ್ಬದ ಪೂಜೆ ಮುಗಿಸಿರುವ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದರ್ಶನ್ ದಾಖಲಾಗಿದ್ದು, ಅವರಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆಗೆ ನುರಿತ ವೈದ್ಯರ ತಂಡವನ್ನು ನೇಮಿಸಲಾಗಿದ್ದು, ವೈದ್ಯರು ದರ್ಶನ್‌ಗೆ ಈಗಾಗಲೇ ಟ್ರೀಟ್ಮೆಂಟ್ ಸ್ಟಾರ್ಟ್ ಮಾಡಿದ್ದಾರೆ. ಹೃದಯ ಬಡಿತ, ರಕ್ತದ ಪರಿಚಲನೆ, ಶುಗರ್, ಬಿಪಿ, ಮೂತ್ರ ಪರೀಕ್ಷೆ, ಲಿವರ್ ಫಂಕ್ಷನ್, ಟ್ರೆಡ್ಮಿಲ್ ಟೆಸ್ಟ್ ಹಾರ್ಟ್ಗಾಗಿ ECG ಹೀಗೆ ಇಡೀ ಬಾಡಿಯನ್ನು ವೈದ್ಯರು ಚೆಕಪ್ ಮಾಡಿದ್ದಾರೆ.
ಇನ್ನು ನಿನ್ನೆ ದರ್ಶನ್ ಆರೋಗ್ಯದ ಕುರಿತು ಚಿಕಿತ್ಸಾ ತಂಡದ ಮುಖ್ಯಸ್ಥ ಡಾ. ನವೀನ್ ಅಪ್ಪಾಜಿಗೌಡ ಅವರು ಮಾತನಾಡಿದ್ದು, ಎಲ್ಲಾ ರೀತಿಯ ಪ್ರಿಲಿಮಿನರಿ ಟೆಸ್ಟ್ ಮಾಡಿದ್ದೇವೆ. ದರ್ಶನ್‌ಗೆ ಎಡಗಾಲು ವೀಕ್ ಇದೆ, ತುಂಬಾ ನೋವಿದೆ. ನೋವು ಕಡಿಮೆ ಮಾಡಲು ಪೇನ್ ಕಿಲ್ಲರ್ ಕೊಟ್ಟಿದ್ದೇವೆ. ಎಲ್ಲಾ ಟೆಸ್ಟ್ ರಿಪೋರ್ಟ್ ಬರಲು 48 ಗಂಟೆ ಬೇಕು. ವೈದ್ಯಕೀಯ ಪರೀಕ್ಷೆ ಪೂರ್ಣವಾಗಲು 24 ಗಂಟೆ ಬೇಕು. ಆ ಬಳಿಕವೇ ದರ್ಶನ್‌ಗೆ ಏನು ಮಾಡಬೇಕು? ಸರ್ಜರಿ ಮಾಡ್ಬೇಕಾ? ಬೇಡ್ವಾ ಅನ್ನೋದರ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ಹೇಳಿದ್ದಾರೆ.
ದರ್ಶನ್ ದಾಖಲಾಗಿರುವ ಹಿನ್ನೆಲೆಯಲ್ಲಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ACP ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. KSRP ತುಕಡಿ ಸೇರಿದಂತೆ ಹಲವು ಪೊಲೀಸರ ನಿಯೋಜನೆ ಮಾಡಲಾಗಿದೆ.
ಸದ್ಯ ದರ್ಶನ್ ಜೈಲಿನಿಂದ ಹೊರಬಂದಿರುವುದು ಅಭಿಮಾನಿಗಳಿಗೆ ಖುಷಿ ತಂದಿದ್ದರೂ, ಅವರಿಗೆ ಕೋರ್ಟ್ ಹಾಕಿರುವ ಷರತ್ತುಗಳು ಅಭಿಮಾನಿಗಳಿಂದ ದೂರ ಉಳಿಯುವಂತೆ ಮಾಡಿದೆ. ದರ್ಶನ್ ಬೇಗ ಗುಣಮುಖರಾಗಲಿ, ಹಾಗೆ ಅವರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾಗಿ ಹೊರಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಮುದ್ದು ಮಗಳ ಮೊದಲ ಫೋಟೋ ಹಂಚಿಕೊಂಡ ರಣವೀರ್-ದೀಪಿಕಾ.. ಪುಟಾಣಿ ಹೆಸರೇನು ಗೊತ್ತಾ?