ದಾವಣಗೆರೆ: KSRTC ಬಸ್ ಹಾಗೂ ಓಮಿನಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಬಳಿ ನಡೆದಿದೆ.
ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂಜುಂಡಪ್ಪ, ರಾಕೇಶ್, ದೇವರಾಜ್ ಮೃತ ದುರ್ದೈವಿಗಳಾಗಿದ್ದು, ಒಂದು ಮಗು ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿದೆ.
ಎಲ್ಲರೂ ಹೊನ್ನಾಳಿ ತಾಲೂಕಿನ ಅರಬಘಟ ಮೂಲದವರು ಎಂದು ತಿಳಿದುಬಂದಿದ್ದು, ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ನ್ಯಾಮತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಅಮಾಯಕ ಪತಿ ನಾಗ ಚೈತನ್ಯನಿಗೆ ಯಾಕೆ ಮೋಸ ಮಾಡಿದೆ? : ಫ್ಯಾನ್ಸ್ ಪ್ರಶ್ನೆಗೆ ನಟಿ ಹೇಳಿದ್ದೇನು?
Post Views: 195