ಬೆಂಗಳೂರು : ಮಿಸ್ಡ್ ಕಾಲ್ನಲ್ಲೇ ಹುಡುಗರಿಗೆ ಹನಿ ಟ್ರ್ಯಾಪ್ ಮಾಡುತ್ತಿದ್ದ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಮಹಮ್ಮದ್ ಆಶೀಕ್, ಖಲೀಲ್ ಹಾಗೂ ಒಬ್ಬ ಮಹಿಳೆ ಬಂಧಿತ ಆರೋಪಿಗಳು.
ಸಂಪಿಗೆಹಳ್ಳಿಯ ತನ್ನ ಮನೆಯನ್ನೇ ಅಡ್ಡೆ ಮಾಡಿಕೊಂಡಿದ್ದ ಮಹಿಳೆ ಮೊದಲಿಗೆ ಅಪರಿಚಿತ ಸಂಖ್ಯೆಗೆ ಕರೆ ಮಾಡುತ್ತಿದ್ದಳು. ಬೆಂಗಳೂರಿನವರು ಅಂತ ಗೊತ್ತಾಗ್ತಿದ್ದಂತೆ ಸಲುಗೆಯ ಮಾನಾಡುತ್ತಿದ್ದ ಚಾಲಾಕಿ ನಜ್ಮಾ ಕಷ್ಟ ಸುಖ ವಿಚಾರಿಸೋ ರೀತಿಯಲ್ಲಿ ಹತ್ತಿರವಾಗ್ತಿದ್ದಳು.
ಪರಿಚಯ ಆದ್ಮೇಲೆ ಸಣ್ಣ ಮೊತ್ತದ ಹಣ ಪಡೆದು ವಾಪಸ್ ಕೊಡ್ತಿದ್ದರು. ನಂತರ ಲೇಡಿ ಯುವಕರನ್ನು ಲೈಂಗಿಕವಾಗಿ ಪ್ರಚೋದಿಸಿ ಬಲೆ ಬೀಳಿ, ಮನೆಯಲ್ಲಿ ಯಾರು ಇಲ್ಲ ಅಂತಾ ಬೆಡ್ ರೂಂಗೆ ಕರೆದೊಯ್ತಿದ್ದಳು. ಈ ವೇಳೆ ಖತರ್ನಾಕ್ ಲೇಡಿಯ ಗ್ಯಾಂಗ್ ಕೂಡ್ಲೇ ಎಂಟ್ರಿಕೊಟ್ಟು ಯಾರ್ ನೀನು.. ರೇಪ್ ಮಾಡೋಕೆ ಬಂದಿದ್ದೀಯಾ ಅಂತಾ ಅವಾಜ್ ಹಾಕಿ, ಹಣ ಕೊಡು ಇಲ್ಲದಿದ್ರೆ ರೇಪ್ ಕೇಸ್ ಹಾಕಿಸ್ತೇವೆ ಎಂದು ಧಮ್ಕಿ ಹಾಕುತ್ತಿದ್ದರು.
ಇನ್ನು ಈ ಗ್ಯಾಂಗ್ ಕಳೆದ ವಾರ ಕೊರಿಯರ್ ಬಾಯ್ಗೆ ಹನಿ ಟ್ರ್ಯಾಪ್ ಮಾಡಿತ್ತು. ಈ ಸಂಬಂಧ ಕೊರಿಯರ್ ಬಾಯ್ ಪೊಲೀಸರು ದೂರು ನೀಡಿದ್ದನು. ಇದೀಗ ದೂರಿನ ಮೇರೆಗೆ ಕಿಲಾಡಿ ಲೇಡಿ ಸೇರಿ ಮೂವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಪ್ರಾಸಿಕ್ಯೂಷನ್ ವಿವಾದದ ಹೊತ್ತಲ್ಲೇ ಸಿದ್ದು ಸರ್ಕಾರಕ್ಕೆ ರಾಜ್ಯಪಾಲರ ಮೆಚ್ಚುಗೆ..!