Download Our App

Follow us

Home » ಅಪರಾಧ » ಯುವತಿಯ ಮಾಯದ ಮಾತಿಗೆ ಮರುಳು.. ಹನಿಟ್ರ್ಯಾಪ್​​ಗೆ ಒಳಗಾದ ಅಂಕಲ್ – ಮೂವರು ಆರೋಪಿಗಳು ಅರೆಸ್ಟ್..!

ಯುವತಿಯ ಮಾಯದ ಮಾತಿಗೆ ಮರುಳು.. ಹನಿಟ್ರ್ಯಾಪ್​​ಗೆ ಒಳಗಾದ ಅಂಕಲ್ – ಮೂವರು ಆರೋಪಿಗಳು ಅರೆಸ್ಟ್..!

ಬೆಂಗಳೂರು : 21 ವರ್ಷದ ಯುವತಿ ಸಿಕ್ಳು ಅಂತಾ ನಂಬಿ ಅಂಕಲ್ ಒಬ್ಬ ಹನಿಟ್ರ್ಯಾಪ್‌ಗೆ ಒಳಗಾಗಿದ್ದಾನೆ. ಇದು 21-57ರ ನಡುವಿನ ಡಿಫ್ರೆಂಟ್ ಲವ್ ಸ್ಟೋರಿ.. ಪರಿಚಯ ಆದ ಬಳಿಕ ಅಂಕಲ್, ಯುವತಿಯ ಮಾಯದ ಮಾತಿಗೆ ಮರುಳಾಗಿದ್ದಾನೆ. ನಂತರ ಯುವತಿ ನಕಲಿ ಪೊಲೀಸರ ಟೀಂ ಕರೆಸಿ ಹಣ, ಚಿನ್ನವನ್ನ ದೋಚಿದ್ದಾಳೆ. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್​ನ್ನು ಬಂಧಿಸಲಾಗಿದೆ.

ಬ್ಯಾಡರಹಳ್ಳಿ ಪೊಲೀಸರಿಂದ ಸುಲಿಗೆ ಗ್ಯಾಂಗ್​​ನ ಸಂತೋಷ್, ಅಜಯ್, ಜಯರಾಜ್ ಎಂಬುವರ ಅರೆಸ್ಟ್ ಆಗಿದ್ದಾರೆ. ಈ ಗ್ಯಾಂಗ್ ಸಿವಿಲ್‌ ಕಂಟ್ರಾಕ್ಟರ್ ಓರ್ವನನ್ನ ಟಾರ್ಗೆಟ್ ಮಾಡಿತ್ತು. ನಯನಾ ಎಂಬ ಯುವತಿ ಕಂಟ್ರಾಕ್ಟರ್​​ಗೆ ಸ್ನೇಹಿತನೊಬ್ಬನ ಮೂಲಕ ಪರಿಚಯ ಆಗಿದ್ದಳು. ಪರಿಚಯ ಆಗ್ತಿದ್ದಂತೆಯೇ ಯುವತಿ ಪ್ರತಿ ದಿನ ಕರೆ ಮಾಡಿ ಸಲುಗೆಯಿಂದ ಮಾತಾಡ್ತಿದ್ದಳು. ನಂತರ ಟೀ‌ ಕುಡಿದುಕೊಂಡು ಹೋಗಿ ಅಂತ ಯುವತಿ ಮನೆಗೆ ಕರೆದಿದ್ದಳು. ಯುವತಿ ಕರೆದ್ಳು ಅಂತಾ ಅಂಕಲ್ ಸೀದಾ ಯುವತಿ ಮನೆಗೆ ಹೋಗಿದ್ದ.

ಡಿಸೆಂಬರ್ 9ರಂದು ಬೆಳಿಗ್ಗೆ ಅಂಕಲ್ ಮನೆಗೆ ಹೋಗಿದ್ದ, ನಂತರ ಕೆಲ ಹೊತ್ತಲ್ಲೇ ನಕಲಿ ಪೊಲೀಸರ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ಬಂಧಿತ ಆರೋಪಿಗಳು ಪೊಲೀಸರ ವೇಷದಲ್ಲಿ ಬಂದಿದ್ದರು. ಇಲ್ಲಿ‌ ವ್ಯವಚಾರ ನಡೆಸ್ತಿದ್ದಿರಾ ನಿಮ್ಮನ್ನ ಅರೆಸ್ಟ್ ಮಾಡ್ತೀವಿ ಅಂತಾ ಬೆದರಿಕೆ ಹಾಕಿದ್ದಾರೆ. ನಂತರ ಆರೋಪಿಗಳು ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದುಕೊಂಡು, ದುಡ್ಡಿಗಾಗಿ ಸೆಟಲ್ ಮೆಂಟ್ ಮಾಡಿಕೊಳ್ಳೋಕೆ ಬೆದರಿಕೆ ಹಾಕಿದ್ದಾರೆ.

ಮೇಡಂ ಇದಾರೆ ಇಲಲ್ಲೇ ಸೆಟಲ್ ಮಾಡ್ಕೋ ಅಂತ ಅಂಕಲ್​​ಗೆ ಬೆದರಿಕೆ ಹಾಕಿದ್ದು, ಈ ವೇಳೆ ಅಂಕಲ್ ಬಳಿ ಇದ್ದ 29 ಸಾವಿರ ನಗದು, ಫೋನ್ ಪೇನಲ್ಲಿ 26ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5ಲಕ್ಷದ ಚಿನ್ನದ ಸರ, ಉಂಗುರ ಬ್ರಾಸ್ ಲೈಟ್ ಕಿತ್ತುಕೊಂಡು ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ನಕಲಿ ಪೊಲೀಸರು ಹೋದ ನಂತರ ಅಂಕಲ್, ಯುವತಿ ನಯಾನಗೆ ಇಬ್ಬರೂ ಸೇರಿ ದೂರು ಕೊಡೋಣ ಎಂದಿದ್ದ. ಈ ವೇಳೆ ಯುವತಿ ತಪ್ಪಿಸಿಕೊಳ್ಳೋಕೆ ಹೊಸ ವರಸೆ ತೆಗೆದಿದ್ದಳು.

ಸ್ಟೇಷನ್ ಕಂಪ್ಲೈಂಟ್ ಅಂತ ಹೋದ್ರೆ ನಂಗೆ ಮಗು ಇದೆ. ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರ್ತಿನಿ ಅಂತ ಮತ್ತೆ ಬ್ಲಾಕ್ ಮೇಲ್ ಮಾಡಿದ್ದಾಳೆ. ನಂತರ ತಾನೇ ಧೈರ್ಯಮಾಡಿ ಸಂತ್ರಸ್ಥ
ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದ. ಸದ್ಯ ಸಂತೋಷ್, ಅಜಯ್, ಜಯರಾಜ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ಎಸ್ಕೇಪ್ ಆಗಿರುವ ಯುವತಿ ನಯನಗಾಗಿ ಹುಡುಕಾಟ ನಡೆಯುತ್ತಿದ್ದು, ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಆರೋಪ – ಕಿರುತೆರೆ ನಟ ಚರಿತ್ ಬಾಳಪ್ಪ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ಮನಮೋಹನ್​ ಸಿಂಗ್​ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕ್ಯಾಬಿನೆಟ್‌ ಸಭೆಯಲ್ಲಿ ಸ್ಮಾರಕಕ್ಕೆ ಜಾಗ ನೀಡಲು

Live Cricket

Add Your Heading Text Here