ಮೈಸೂರು : ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಹತ್ತನೇ ತರಗತಿ ವಿದ್ಯಾರ್ಥಿ R. ಪರ್ಜನ್ಯ ಮತ್ತು ತಂಡ ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪರ್ಜನ್ಯ ಹಾಗೂ ತಂಡ ಕೊಡಗಿನಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪರ್ಜನ್ಯ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ದೊಡ್ಡ ಸೋಮನಹಳ್ಳಿ ಗ್ರಾಮದ ಡಾಕ್ಟರ್ ಡಿ ಸಿ ರಾಮಚಂದ್ರ ಹಾಗೂ N. ಮಧುಲತಾರವರ ಸುಪುತ್ರನಾಗಿರುತ್ತಾನೆ. ಈ ತಂಡವು ರಾಷ್ಟ್ರಮಟ್ಟದಲ್ಲೂ ಗೆಲುವು ಸಾಧಿಸಲಿ ಎಂದು ಆಶಿಸುತ್ತೇವೆ. ವಿದ್ಯಾರ್ಥಿಯನ್ನು ಹಡೆದ ತಂದೆ ತಾಯಿಗಳಿಗೂ, ತರಬೇತಿ ನೀಡಿದ ಗುರುಗಳಿಗೂ ಅಭಿನಂದನೆಗಳನ್ನು ಸಮರ್ಪಿಸುತ್ತೇವೆ.
ಇದನ್ನೂ ಓದಿ : ಬಳ್ಳಾರಿ ಜೈಲಿನಿಂದ ದರ್ಶನ್ ರಿಲೀಸ್ - ಅಭಿಮಾನಿಗಳಲ್ಲಿ ಸಂಭ್ರಮವೋ ಸಂಭ್ರಮ..!
Post Views: 47