ಬೆಂಗಳೂರು : ಚೀನಾದಲ್ಲಿ HMPV ಹರಡುತ್ತಿರುವ ಸುದ್ದಿಗಳು ಎಲ್ಲೆಡೆ ಆತಂಕ ಮೂಡಿಸುತ್ತಿದ್ದಂತೆ ಇದೀಗ ಭಾರತಕ್ಕೂ ಈ ಮಾರಣಾಂತಿಕ ವೈರಸ್ ಕಾಲಿಟ್ಟಿದೆ. ಇದೀಗ ಭಾರತದಲ್ಲಿ ಒಂದಲ್ಲ.. ಎರಡಲ್ಲ 6 HMPV ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ.
ಕರ್ನಾಟಕದಲ್ಲಿ-2, ತಮಿಳುನಾಡಿನಲ್ಲಿ 2 ಕೇಸ್ ಹಾಗೂ ಗುಜರಾತ್, ಪಶ್ಚಿಮ ಬಂಗಾಳದಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ. ಒಂದು ವರ್ಷದ ಒಳಗಿನ ಮಕ್ಕಳಲ್ಲೇ ವೈರಸ್ ಹೆಚ್ಚಾಗ್ತಿದ್ದು, ಎಲ್ಲಾ ರಾಜ್ಯಗಳಲ್ಲೂ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈಗಾಗಲೇ ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಅಲರ್ಟ್ ಆಗಿದ್ದಾರೆ.
ಒಂದೂ ಕೇಸ್ ಬರದೇ ಇದ್ರೂ ಕೇರಳದಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಿದ್ದಾರೆ. ಇನ್ನು ಆಸ್ಪತ್ರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಾಸ್ಕ್ ಜಾರಿಯಾಗಿದ್ದು, ಕರ್ನಾಟಕದಲ್ಲೂ ಆರೋಗ್ಯ ಸಚಿವರು ಎಮರ್ಜೆನ್ಸಿ ಮೀಟಿಂಗ್ ಕರೆದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ‘ಗೋಲ್ಡ್ ಬ್ಯೂಟಿ’ಯಿಂದ ಸಂಕಷ್ಟಕ್ಕೆ ಸಿಲುಕಿದ್ರಾ MLA ವಿನಯ್ ಕುಲಕರ್ಣಿ? ಯಾವುದೇ ಕ್ಷಣ ನೋಟಿಸ್ ಸಾಧ್ಯತೆ!