ಬೆಂಗಳೂರು : ನೆಲಮಂಗಲದಲ್ಲಿ ಇತಿಹಾಸ ತಜ್ಞ ಡಾ. H.S ಗೋಪಾಲ ರಾವ್ ನಿಧನರಾಗಿದ್ದಾರೆ. ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ವಾಸವಿದ್ದ 78 ವರ್ಷದ ಗೋಪಾಲ ರಾವ್ ಕೊನೆಯುಸಿರೆಳೆದಿದ್ದಾರೆ. ಇವರು ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಚೀನ ಪಳೆಯುಳಿಕೆಗಳ ಪತ್ತೆಹಚ್ಚಿ ಪುಸ್ತಕ ರೂಪದಲ್ಲಿ ತಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೋಳರ ಕಾಲದ ದೇವಾಲಯದ ಪಳೆಯುಳಿಕೆ ಮತ್ತು ಚೋಳರ ರಾಜಧಾನಿ ಮಾನ್ಯಪುರ ಮಣ್ಣೆಯ ಸಂಶೋಧನೆ ಮಾಡಿದ್ದಾರೆ. ಸಾಕಷ್ಟು ಪುಸ್ತಕ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆಗಳನ್ನು ಪಡೆದುಕೊಂಡಿದ್ದಾರೆ.
ಈಗಿನ ಭಿನ್ನಮಂಗಲವು 1110ರಲ್ಲಿ ವಿನ್ನಮಂಗಲಂ ಆಗಿತ್ತು. ವಿನ್ನಮಂಗಲಂದಲ್ಲಿ ಚೋಳರ ಕೊನೆಯ ಸಂತತಿ ರಾಜ ಚೋಳರ ದೊರೆ ಶ್ರೀ ಮುಕ್ತಿನಾಥೇಶ್ವರ ದೇವಾಲಯವನ್ನು ನಿರ್ಮಿಸಿದ್ದರು. ಅಳಿದು ಹೋಗುವ ಸ್ಥಿತಿಯಲ್ಲಿದ್ದ ದೇವಾಲಯಗಳ ಕಡೆ ಆಸಕ್ತಿ ಹೊರಳಿಸಿ, ಅಲ್ಲಿದ್ದ ಒಂದು ಶಾಸನದ ಮೂಲಕ ಜನರಿಗೆ ಮಾಹಿತಿಯನ್ನು ತಿಳಿಸಿಕೊಟ್ಟರು. ಕರ್ನಾಟಕ ರಾಜ್ಯ ಹಾಗೂ ನೆಲಮಂಗಲಕ್ಕೆ ತಮ್ಮ ಸಾಹಿತ್ಯ ಮತ್ತು ಸಂಶೋಧನಾತ್ಮಕ ವಿಚಾರಗಳನ್ನು ಒದಗಿಸುತ್ತಿದ್ದವರಲ್ಲಿ ಪ್ರಮುಖರು.
ಇದನ್ನೂ ಓದಿ : ಗ್ರ್ಯಾಂಡ್ ಬರ್ತ್ಡೇ ಸೆಲೆಬ್ರೇಷನ್ಗೆ ಬ್ರೇಕ್ ಹಾಕಿದ ಡಿಂಪಲ್ ಕ್ವೀನ್ – ಫ್ಯಾನ್ಸ್ ಬೇಸರ..!