ಕಾರವಾರ : ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿ ಈವರೆಗೂ ಪತ್ತೆಯಾಗದ ಸ್ಥಳೀಯ ಜಗನ್ನಾಥ್ ನಾಯ್ಕ, ಗಂಗೆ ಕೊಳ್ಳದ ಲೊಕೇಶ ನಾಯ್ಕ ಮತ್ತು ಕೇರಳ ಮೂಲದ ಅರ್ಜುನ್ ಹಾಗೂ ಆತ ಚಲಾಯಿಸುತ್ತಿದ್ದ ಲಾರಿ ಪತ್ತೆಗೆ, ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿದೆ.
ಸದ್ಯ ಮೂರನೇ ಹಂತದ ಕಾರ್ಯಾಚರಣೆ ಸಂದರ್ಭದಲ್ಲಿ ಒಂದು ಮೂಳೆ ಪತ್ತೆಯಾಗಿದೆ. ಮೂವರ ಪೈಕಿ ಯಾರ ಮೂಳೆ ಎಂದು ಪತ್ತೆ ಹಚ್ಚಲು ಪೋಲಿಸ್ ಇಲಾಖೆ ಅದನ್ನ DNA ಟೆಸ್ಟ್ಗೆ ಕಳುಹಿಸಿದೆ.
ಅದರಂತೆ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದ ಲಾರಿ ಇಂಜಿನ್ ಪತ್ತೆಯಾಗಿದ್ದು, ಕ್ರೇನ್ ಮೂಲಕ ಇಂಜಿನ್ನ್ನು ಮೇಲೆತ್ತಲಾಗಿದೆ. ಗ್ಯಾಸ್ ಟ್ಯಾಂಕರ್ ಇಂಜಿನ್ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಇನ್ನು, ಜುಲೈ 16ರಂದು ಗುಡ್ಡಕುಸಿತದ ವೇಳೆ ನದಿಯಲ್ಲಿ ಮುಳುಗಡೆಯಾಗಿದ್ದ ಲಕ್ಷ್ಮಣ ನಾಯ್ಕ ಅವರ ಸ್ಕೂಟಿಯೂ ಪತ್ತೆಯಾಗಿದೆ. ಈಶ್ವರ ಮಲ್ಪೆ ಅವರ ಶೋಧದಿಂದ ಸ್ಕೂಟಿ ಪತ್ತೆಯಾಗಿದ್ದು, ನುಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಸ್ಕೂಟಿಯನ್ನು ನದಿಯಿಂದ ಹೊರತೆಗೆಯಲಾಗಿದೆ.
ಅಭಿನೇಶಿಯ ಓಶಿಯನ್ ಸರ್ವಿಸ್, ಡ್ರೆಜ್ಜಿಂಗ್ ಮಷೀನ್ ಮೂಲಕ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಗುತ್ತಿಗೆ ಪಡೆದುಕೊಂಡಿದ್ದು, ಗೋವಾದಿಂದಲೂ ಕೆಲ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ತಂದು ಕಾರ್ಯಾಚರಣೆ ನಡೆಸುತ್ತಿದೆ. ಅಪ್ರೋಜ್ ನರಪಾಲಿ, ದೀಪ್ ನಾರಾಯಣ ಚೌಹಾಣ್, ಕರಣ ಸಿಂಗ್ ಎಂಬ ಮುಂಬೈ ಪೋರ್ಟ ಬೇಸ್ನ ಮೂವರು ಮುಳುಗು ತಜ್ಞರನ್ನು ಶೋಧ ಕಾರ್ಯಾಚರಣೆಗಾಗಿ ಕರೆಸಿಕೊಳ್ಳಲಾಗಿದೆ.
ಇದನ್ನೂ ಓದಿ : ಚೆಸ್ ಒಲಿಂಪಿಯಾಡ್ನಲ್ಲಿ ಅವಳಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ..!