ಬೆಂಗಳೂರು : ಬಳ್ಳಾರಿ ಪಂಜರದಲ್ಲಿ ಜೈಲು ಹಕ್ಕಿಯಾಗಿದ್ದ ನಟ ದರ್ಶನ್ಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಬೆನ್ನು ನೋವಿಗೆ ಚಿಕಿತ್ಸೆಗೆಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಪಡೆದು ಬಂಧಿಖಾನೆಯಿಂದ ಕುಟುಂತ್ತಾ, ಕುಟುಂತ್ತಾ ದಾಸ ಜೈಲಿಂದ ಹೊರ ಬಂದಿದ್ದಾರೆ.
ಇನ್ನು ಈ ಆರು ವಾರಗಳ ಅವಧಿಯನ್ನು ದರ್ಶನ್ ಅವರು ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ಹೀಗಿರುವಾಗಲೇ ದರ್ಶನ್ಗೆ ಶೀಘ್ರವೇ ಬಿಗ್ ಶಾಕ್ ನೀಡಲು ಪೊಲೀಸರು ನಿರ್ಧರಿಸಿದ್ದಾರೆ. ಹೌದು.. ಹೈಕೋರ್ಟ್ ನೀಡಿದ ಮಧ್ಯಂತರ ಬೇಲ್ ಆದೇಶ ಪ್ರಶ್ನಿಸಲು ಇದೀಗ ತಯಾರಿ ಮಾಡಲಾಗುತ್ತಿದೆ. ಸುಪ್ರೀಂಕೋರ್ಟ್ ಮೊರೆ ಹೋಗಲು ಬೆಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಮಹತ್ವದ ಚರ್ಚೆ ನಡೆಯುತ್ತಿದ್ದು, ಸೋಮವಾರದ ನಂತರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸುದೀರ್ಘ ಚರ್ಚೆ ಮಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಕಾನೂನು ತಜ್ಞರ ಜೊತೆಯೂ ಚರ್ಚಿಸಿದ್ದಾರೆ. ಐದು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿರುವ ಪೊಲೀಸರು, ಹೈಕೋರ್ಟ್ ನೀಡಿರುವ ಆದೇಶವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ.
ಐದು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿರುವ ಪೊಲೀಸರು :
ಕಾರಣ-1 : ಅತೀವ ಬೆನ್ನು ನೋವಿದ್ರೂ 6 ಗಂಟೆ ಕಾರಿನಲ್ಲಿ ಕೂತು ಪ್ರಯಾಣ ಮಾಡಿ ಬಂದಿದ್ದೇಗೆ?
ಕಾರಣ-2 : ಬೆಂಗಳೂರಿಗೆ ಬಂದ ಕೂಡ್ಲೇ ಆಸ್ಪತ್ರೆಗೆ ಯಾಕೆ ಹೋಗಿಲ್ಲ, ಐಷಾರಾಮಿ ಅಪಾರ್ಟ್ಮೆಂಟ್ ನೇರವಾಗಿ ಹೋಗಿದ್ದು ಸರಿಯೇ?
ಕಾರಣ-3 : ಅಪಾರ್ಟ್ಮೆಂಟ್ ಒಳಗಡೆ ದರ್ಶನ್ ಚೆನ್ನಾಗಿ ಓಡಾಡ್ತಿದ್ದಾರೆ.
ಕಾರಣ-4 : ಐಷಾರಾಮಿ ಕಾರುಗಳು ಅಪಾರ್ಟ್ಮೆಂಟ್ನಲ್ಲಿ ಬಂದಿದ್ದೇಕೆ?
ಕಾರಣ-5 : ಮನೆಯಲ್ಲಿ ದರ್ಶನ್ ಆರಾಮವಾಗಿ ಓಡಾಡುತ್ತಿದ್ದಾರೆ
ಒಟ್ಟಿನಲ್ಲಿ ಈ 45 ದಿನ ದರ್ಶನ್ಗೆ ಅಕ್ಷರಶಃ ಚಾಲೆಂಜಿಂಗ್ ಆಗಿದೆ. ಈ ಆರು ವಾರಗಳಲ್ಲಿ ಸಣ್ಣ ಯಡವಟ್ಟು ಮಾಡ್ಕೊಂಡ್ರು ಜಾಮೀನು ವಜಾ ಆಗೋದು ಶತಸಿದ್ಧ. ಹೀಗಾಗಿ, ದರ್ಶನ್ ಅವರ ಪ್ರತಿ ಹೆಜ್ಜೆ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. CCTV ದೃಶ್ಯದ ಸಮೇತ ಎಲ್ಲವನ್ನೂ ಪೊಲೀಸರು ಕಲೆ ಹಾಕಿದ್ದಾರೆ. ಇದೆಲ್ಲವನ್ನೂ ನಮೂದಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ತಯಾರಿ ಕೂಡ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ : ನಾಡಿನೆಲ್ಲೆಡೆ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ.. ಕುಂದಾನಗರಿಯಲ್ಲಿ ಮಧ್ಯರಾತ್ರಿ ಅದ್ದೂರಿ ಕನ್ನಡದ ಉತ್ಸವ..!