Download Our App

Follow us

Home » ಜಿಲ್ಲೆ » ಮಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ – ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು..!

ಮಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ – ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು..!

ಮಂಗಳೂರು : ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬ ನಾಲ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕುತ್ತಾರಿನ ಮದನಿ ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಮೃತರನ್ನು ಮದನಿ ನಗರದ ನಿವಾಸಿಗಳಾದ ಯಾಸೀರ್(45) ಮತ್ತವರ ಪತ್ನಿ ಮರಿಯಮ್ಮ(40) ಹಾಗೂ ಇಬ್ಬರು ಮಕ್ಕಳಾದ ರಿಯಾನಾ ಮತ್ತು ರಿಫಾನ ಎಂದು ಗುರುತಿಸಲಾಗಿದೆ. ಅಬೂಬ್ಬಕರ್ ಎಂಬವರ ಮನೆಯ ಗೋಡೆಯೂ ಯಾಸಿರ್ ಅವರ ಮನೆಯ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ವರದಿಗಳ ಪ್ರಕಾರ, ರಾತ್ರಿ ಸುರಿದ ಭಾರೀ ಮಳೆಗೆ ಗೋಡೆ ನೆನೆದು ಕಸಿದು ಬಿದ್ದಿದೆ ಈ ಎಂದು ಹೇಳಲಾಗುತ್ತಿದೆ.

ಸದ್ಯ ಮೂವರ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಓರ್ವ ಬಾಲಕಿಯ ಮೃತದೇಹ ಹೊರ ತಗೆಯುವುದಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿದ್ದು, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.

ಇದನ್ನೂ ಓದಿ : ಬೆಂಗಳೂರು : ಜಸ್ಟ್ 30 ಸೆಕೆಂಡ್ಸ್, ಸಿನಿಮಾ ಸ್ಟೈಲ್​ನಲ್ಲಿ ಗನ್​ ತೋರಿಸಿ 70 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ..!

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here