ಬೆಂಗಳೂರು : ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಅಂದಂತೆ, ಇವರಿಗೆಲ್ಲಾ ಕಳ್ಳನಿಗೆ ಒಂದು ಪಿಳ್ಳೆ ನೆಪ. ನಾನು ಸಿದ್ದರಾಮಯ್ಯ ರಾಜೀನಾಮೆ ಕೇಳಿಲ್ಲ, ಸಿದ್ದರಾಮಯ್ಯ ರಾಜೀನಾಮೆ ಕೊಡಿ ಅಂತಾ ಎಲ್ಲಿ ಕೇಳಿದ್ದೇನೆ ಎಂದು ಸಿದ್ದು ಪರ ಬ್ಯಾಟಿಂಗ್ ಮಾಡಿದ ಜಿಟಿ ದೇವೇಗೌಡಗೆ ಕೇಂದ್ರ ಸಚಿವ ಹೆಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, FIR ಆಗಿದೆ ರಾಜೀನಾಮೆ ಕೊಡಿ ಅಂತಾ ನಾನು ಕೇಳಿದ್ದೀನಾ..? ಅಧಿಕಾರ ದುರುಪಯೋಗ ವಿಚಾರಕ್ಕೆ ರಿಸೈನ್ ಮಾಡಿ ಎಂದಿದ್ದೀನಿ. ಅಧಿಕಾರಿಗಳ ಮುಖಾಂತರ ಸಾಕ್ಷಿ ನಾಶ ಮಾಡಲಾಗ್ತಿದೆ, ನನ್ನ ವಿರುದ್ಧವೂ FIR ಇದೆ, ಇಲ್ಲಾ ಅಂದಿದ್ದೀನಾ..? ಮೈಸೂರಿನವರು ತೊಂದರೆಗೆ ಸಿಗಬಾರದು ಅಂತಾ ಹಾಗೆ ಹೇಳಿರಬಹುದು ಎಂದಿದ್ದಾರೆ.
ಕುಮಾರಸ್ವಾಮಿ ಮೊದಲು ರಾಜಿನಾಮೆ ನೀಡಲಿ ಎಂದಿದ್ದು ಯಾರು..? ರಾಜೀನಾಮೆ ಕೊಡೋ ಸ್ಥಿತಿ ಬಂದ್ರೆ ಕೊಡೋಣ ಎಂದು ಹೆಚ್ಡಿಕೆ ಹೇಳಿದ್ದಾರೆ.
ಇದನ್ನೂ ಓದಿ : 14 ಸೈಟ್ಗಳ ಸಾಕ್ಷ್ಯ ನಾಶ ಆರೋಪ – ಸಿಎಂ ಫ್ಯಾಮಿಲಿ ವಿರುದ್ಧ EDಗೆ ಮತ್ತೊಂದು ದೂರು..!
Post Views: 17