ಹಾವೇರಿ : ಕಳ್ಳತನದ ಆರೋಪಿ ಮೇಲೆ ಮಾರಕಾಸ್ತ್ರಗಳಿಂದ ಮನಸ್ಸೊ ಇಚ್ಛೆ ಹಲ್ಲೆ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ನಾಗೇಂದ್ರನಮಟ್ಟಿಯ ನಿವಾಸಿ ಸುದೀಪ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಮಾರಕಾಸ್ತ್ರಗಳಿಂದ ಹೊಡೆಯುವ ದೃಶ್ತ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಹಾವೇರಿಯ ವೀರಾಪುರ ಆಸ್ಪತ್ರೆ ಬಳಿ ಸುದೀಪ್ ಮೇಲೆ ಕೊಡಲಿ, ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಮಧ್ಯರಾತ್ರಿ ಪಾನ್ ಶಾಪ್‌ಗೆ ಬಂದಿದ್ದ ಸುದೀಪ್ ಮೇಲೆ ಬೈಕ್‌ನಲ್ಲಿ ಬಂದಿದ್ದ ಐದಾರು ಜನರ ತಂಡದಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಕೊಡಲಿಯಿಂದ ತಲೆ, ಕುತ್ತಿಗೆ ಸೇರಿ ಹಲವು ಕಡೆ ಹೊಡೆದಿದ್ದಾರೆ.
ಹಾವೇರಿ ಶಹರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಬ್ದುಲ್, ರೆಬೆಲ್, ಬಬಲು, ಅಲ್ಲು, ಸಾಹಿಲ್ ಹಾಗೂ ಮತ್ತೋರ್ವನ ಮೇಲೆ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ನಿರ್ದೇಶಕ ಬ್ರಹ್ಮರವರಿಗೆ ಬೆಂಗಳೂರು ಸಂಸ್ಥೆಯ ದಾದಾಸಾಹೇಬ್ ಫಾಲ್ಕೆ ಅಚೀವ್ ಮೆಂಟ್-2024 ಪ್ರಶಸ್ತಿ..!
Post Views: 88