ಹಾವೇರಿ : ಹೋರಿ ಬೆದರಿಸುವ ಹಬ್ಬದಲ್ಲಿ ಹೋರಿ ತಿವಿದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಹಾವೇರಿಯ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಹಿರೇನಂದಿಹಳ್ಳಿಯ ಹದಿನೈದು ವರ್ಷದ ವಂಸತ ವೀರಾಪುರ ಮೃತ ಬಾಲಕ.
ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದಲ್ಲಿ ಆಯೋಜನೆ ಮಾಡಲಾಗಿತ್ತು. ಶಾಲೆಗೆ ಹೋಗ್ತಿನಿ ಅಂತಾ ಹೇಳಿ 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ವಂಸತ ಹೋರಿ ಬೆದರಿಸುವ ಹಬ್ಬಕ್ಕೆ ಹೋಗಿದ್ದನು.
ಇನ್ನು ಹಬ್ಬದಲ್ಲಿ ಹೋರಿ ತಿವಿದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ : ಅಸ್ಸಾದ್ ಆಡಳಿತ ಪತನದ ಬಳಿಕ ಸಿರಿಯಾದಿಂದ 75 ನಾಗರಿಕರನ್ನು ಸ್ಥಳಾಂತರಿಸಿದ ಭಾರತ..!
Post Views: 62