ಹಾವೇರಿ : ಹಾವೇರಿ ಶಹರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಮೋಟಾರ್ ಬೈಕ್ಗಳನ್ನ ಜಪ್ತಿ ಮಾಡಿದ್ದಾರೆ. ವಿಶೇಷ ತಂಡವನ್ನು ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು 16 ಬೈಕ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಮೋಟಾರ್ ಸೈಕಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಬಸವಣ್ಣೆಪ್ಪ ನಾಗೇನಹಳ್ಳಿ ಎಂಬಾತನನ್ನ ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಕವಲೆತ್ತು ಗ್ರಾಮದ ನಿವಾಸಿ. ಹಾವೇರಿ ಶಹರ ಬ್ಯಾಡಗಿ ಪಟ್ಟಣ, ರಾಣೆಬೆನ್ನೂರು ಶಹರ, ದಾವಣಗೆರೆ ಶಹರ ಹಾಗೂ ಇತರೆ ಜಿಲ್ಲೆಗಳಲ್ಲಿ, ಕಳ್ಳತನ ಮಾಡಿದ್ದ ಒಟ್ಟು 16 ಮೋಟಾರ್ ಸೈಕಲ್ಗಳ ಅಂದಾಜು ಮೊತ್ತ 5,15,000/- ರೂ.ಗಳು ಆಗಿದೆ.
ಇದನ್ನೂ ಓದಿ : ತುಮಕೂರು : ಪ್ರಥಮ ಪಿಯುಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು..!
Post Views: 102