Download Our App

Follow us

Home » ಸಿನಿಮಾ » ಮತ್ತೊಂದು ಬೇಬಿಬಂಪ್‌ ಲುಕ್​ನಲ್ಲಿ ಹರಿಪ್ರಿಯಾ – ಸ್ಪೆಷಲ್​ ಫೋಟೋಶೂಟ್​ ಹಂಚಿಕೊಂಡ ಕ್ಯೂಟ್‌ ಕಪಲ್‌..!

ಮತ್ತೊಂದು ಬೇಬಿಬಂಪ್‌ ಲುಕ್​ನಲ್ಲಿ ಹರಿಪ್ರಿಯಾ – ಸ್ಪೆಷಲ್​ ಫೋಟೋಶೂಟ್​ ಹಂಚಿಕೊಂಡ ಕ್ಯೂಟ್‌ ಕಪಲ್‌..!

ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಸದ್ಯದಲ್ಲೇ ಹೊಸ ಅತಿಥಿಯ ಆಗಮನವಾಗಲಿದೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ಇದೀಗ ಈ ಸ್ಟಾರ್​ ದಂಪತಿ ಬೇಬಿ ಬಂಪ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಚಂದನವನದ ಈ ಮುದ್ದಾದ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಅಭಿಮಾನಿಗಳು ನಟಿ ಗರ್ಭಿಣಿ ಎಂದು​ ಗೇಸ್​ ಮಾಡಿದ್ದರು. ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಗರ್ಭಿಣಿ ಹಾಗೇ ಹಾಣಿಸಿಕೊಂಡಿದ್ದರು.

ಇದಾದ ಬಳಿಕ ಖುದ್ದು ಈ ಖುಷಿ ಸುದ್ದಿಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿತ್ತು. ಮೊದಲು ಮಾಲ್ಡೀವ್ಸ್​ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿರುವ ಸಿಂಹಪ್ರಿಯಾ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗಪಡಿಸಿದ್ದರು. ಅಲ್ಲದೇ ಫೋಟೋಗಳಲ್ಲಿ ಹರಿಪ್ರಿಯಾ ಬೇಬಿಬಂಪ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಮತ್ತೆ ಮುದ್ದಾದ ಮತ್ತೊಂದು ಬೇಬಿ ಬಂಪ್​ನಲ್ಲಿ ನೀಲಿ ಬಣ್ಣದ ಕಾಸ್ಟ್ಯೂಮ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಯಾವುದೇ ದೃಷ್ಟಿಯಾಗದಿರಲಿ, ಸೂಪರ್​ ಬೇಬಿ ಶೂಟ್​ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ಇದನ್ನೂ ಓದಿ : ಹೊಸ ವರ್ಷದಂದು ಅಮಿತ್ ಶಾ ಭೇಟಿಯಾದ ಬಿ.ವೈ ವಿಜಯೇಂದ್ರ..!

Leave a Comment

DG Ad

RELATED LATEST NEWS

Top Headlines

ಹೊಸ ವರ್ಷದ ಆರಂಭದಲ್ಲೇ ಬಿಗ್ ಶಾಕ್​​.. ಸ್ಟಾರ್ ನಟನಿಗೆ ಅನಾರೋಗ್ಯ – ಫ್ಯಾನ್ಸ್ ಆತಂಕ.. ಹೆಲ್ತ್​ ಬುಲೆಟಿನ್​​​ನಲ್ಲಿ ಏನಿದೆ ?

ಚೆನ್ನೈ : ತಮಿಳು ನಟ ವಿಶಾಲ್‌ ಅವರು ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ಚಿತ್ರರಂಗದಲ್ಲಿ ವಿಶಾಲ್‌ ಫೇಮಸ್‌ ಆಗಿದ್ದಾರೆ. ಅಲ್ಲದೆ

Live Cricket

Add Your Heading Text Here