Download Our App

Follow us

Home » ಕ್ರೀಡೆ » ಕೊನೆಗೂ ನತಾಶಾ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ – ಫ್ಯಾನ್ಸ್​ಗೆ ವಿಶೇಷ ಮನವಿ..!

ಕೊನೆಗೂ ನತಾಶಾ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ – ಫ್ಯಾನ್ಸ್​ಗೆ ವಿಶೇಷ ಮನವಿ..!

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್‌ ಸಂಬಂಧ ಬಿರುಕು ಬಿಟ್ಟಿದೆ. ಇಬ್ಬರೂ ಡಿವೋರ್ಸ್ ಪಡೆದಿದ್ದಾರೆ ಅನ್ನೋ ವಿಚಾರ ಕಳೆದ ಹಲವು ದಿನಗಳಿಂದ ಚರ್ಚೆಯಾಗುತಿತ್ತು. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಸ್ವತಃ ಹಾರ್ದಿಕ್ ಪಾಂಡ್ಯ ನತಾಶಾ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದಿರುವುದಾಗಿ ಪಾಂಡ್ಯ ಹಾಗೂ ನತಾಶಾ ಖಚಿತಪಡಿಸಿದ್ದಾರೆ.

ಈ ಕರಿತು ತಮ್ಮ ಇನ್‌ಸ್ಟಾಗ್ರಾಂ ಮೂಲಕ ಹಾರ್ದಿಕ್ ಪಾಂಡ್ಯ-ನತಾಶ ಭಾವುಕ ಪೋಸ್ಟ್ ನೊಂದಿಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. “ಕಳೆದ ನಾಲ್ಕು ವರ್ಷಗಳಿಂದ ನತಾಶ್ ಹಾಗಾ ನಾನು ಜೊತೆಯಾಗಿ ಹೆಜ್ಜೆ ಹಾಕಿದ್ದೇವು. ಆದರೆ ಇದೀಗ ಹಲವು ಕಾರಣಗಳಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರ ಸರಿಯುತ್ತಿದ್ದೇವೆ. ನಾವು ಜೊತೆಯಾಗಿರವು ಹಲವು ಪ್ರಯತ್ನ ನಡೆಸಿದ್ದೇವೆ. ಇಬ್ಬರ ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.

ಡಿವೋರ್ಸ್ ನಮಗೆ ಸುಲಭದ ನಿರ್ಧಾರವಾಗಿರಲಿಲ್ಲ. ಜೊತೆಯಾಗಿ ನಾವು ಹಲವು ಸಂತಸದ ಕ್ಷಣಗಳನ್ನು ಕಳೆದಿದ್ದೇವೆ. ಪರಸ್ಪರ ಗೌರವಿಂದ ಕಂಡಿದ್ದೇವೆ. ಒಂದು ಕುಟುಂಬವಾಗಿ ನಾವು ಹೆಜ್ಜೆ ಹಾಕಿದ್ದೇವೆ. ನಮ್ಮಿಬ್ಬರಿಗೆ ಮಗ ಅಗಸ್ತ್ಯನಿದ್ದಾನೆ. ಆಗಸ್ತ್ಯ ನಮ್ಮಿಬ್ಬರ ಪ್ರಮುಖ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಆತನಿಗೆ ನಾವಿಬ್ಬರು ಪೋಷಕರಾಗಿದ್ದೇವೆ. ಆತನ ಜವಾಬ್ದಾರಿ ನಮ್ಮಿಬ್ಬರಿಗೂ ಇದೆ. ಆತನ ಖುಷಿ, ಸಂತೋಷಕ್ಕೆ ನಾವು ಎಲ್ಲವನ್ನೂ ಮಾಡುತ್ತೇವೆ.

ಈ ಸಂದರ್ಭದಲ್ಲಿ ನಾವು ಎಲ್ಲರಲ್ಲಿ ಕಳಕಳಿಯ ಮನವಿ ಮಾಡುತ್ತೇವೆ. ನಮ್ಮ ಖಾಸಗಿ ಕ್ಷಣಗಳಿಗೆ ಗೌರವ ನೀಡಿ. ಈ ಕಠಿಣ ಸಂದರ್ಭದಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ” ಎಂದು ಹಾರ್ದಿಕ್ ಪಾಂಡ್ಯ -ನತಾಶಾ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ದರ್ಶನ್​​ ಗ್ಯಾಂಗ್​​ಗೆ ಮತ್ತೆ ಜೈಲುವಾಸ – ಆ.​1ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ..!

 

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here