ಬೆಂಗಳೂರು : ಬಸವನಗುಡಿ PSI ವಿರುದ್ದ ಕಿರುಕುಳ ಆರೋಪವೊಂದು ಕೇಳಿ ಬಂದಿದೆ. ಮಾಜಿ ಪ್ರಿಯತಮೆ ಕಿರುಕುಳ ನೀಡಿದ ಹಿನ್ನೆಲೆ ಬಸವನಗುಡಿ ಠಾಣೆ ಸಬ್ಇನ್ಸ್ಪೆಕ್ಟರ್ ರಾಜಕುಮಾರ ವಿರುದ್ದ ಯುವತಿ ಕಮಿಷನರ್ಗೆ ದೂರು ನೀಡಿದ್ದಾರೆ
ಖಾಸಗಿ ಆಸ್ಪತ್ರೆ ವೈದ್ಯೆಯಾಗಿರುವ PSI ಮಾಜಿ ಪ್ರಿಯತಮೆ 2020ರಲ್ಲಿ ರಾಜಕುಮಾರ್ಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಳು. PSI-ಡಾಕ್ಟರ್ ಸ್ನೇಹ ನಂತರ ಪರಸ್ಪರ ಪ್ರೀತಿಗೆ ತಿರುಗಿತ್ತು. ಬಳಿಕ MBBS ವ್ಯಾಸಂಗ ಮಾಡ್ತಿದ್ದ ಯುವತಿಗೆ PSI 2020ರಲ್ಲಿ ಪ್ರಪೋಸ್ ಮಾಡಿದ್ದರು.
ಕೆಲ ವರ್ಷಗಳಿಂದ ಪ್ರೀತಿಸಿ ಇತ್ತೀಚೆಗೆ ಅಸಲಿ ವರಸೆ ಶುರುಮಾಡಿದ್ದ PSI, ಪ್ರಿಯತಮೆಯಿಂದ ಹಂತ-ಹಂತವಾಗಿ 1.71 ಲಕ್ಷ ಹಣ ಪಡೆದ್ದಿನು. ಅಷ್ಟೇ ಅಲ್ಲದೆ, ಇತ್ತೀಚೆಗೆ ನಗ್ನ ಫೋಟೋ ಕಳಿಸುವಂತೆ ಕಿರುಕುಳ ನೀಡಿದ್ದ ಆರೋಪ ಕೂಡ ಕೇಳಿ ಬಂದಿದೆ. ನಿರಾಕರಿಸಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ಹಣ ವಾಪಸ್ ಕೇಳಿದ್ದಕ್ಕೆ ಠಾಣೆಗೆ ಬಂದು ಕಲೆಕ್ಟ್ ಮಾಡುವಂತೆ ಅವಾಜ್ ಹಾಕಿದ್ದನಂತೆ. ಇದರೊಂದಿಗೆ ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ ನೀಡ್ತಿರೋ ಆರೋಪ ಕೂಡ ಕೇಳಿ ಬಂದಿದೆ.
ಇನ್ನು ಬಸವನಗುಡಿ ಠಾಣೆ ಸಬ್ಇನ್ಸ್ಪೆಕ್ಟರ್ ರಾಜಕುಮಾರ ಕಿರುಕುಳ ನೀಡಿದ ಹಿನ್ನಲೆ, PSI ವಿರುದ್ಧ ಮಾಜಿ ಪ್ರಿಯತಮೆ E-Mail ಮೂಲಕ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ಗೆ ದೂರು ನೀಡಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣೆಗೆ ದೂರು ವರ್ಗಾವಣೆ ಮಾಡಿದ ಕಮಿಷನರ್, ಡಾಕ್ಟರ್ ದೂರಿನ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಬೈ ಎಲೆಕ್ಷನ್ ಬೆನ್ನಲ್ಲೇ ಬೆಟ್ಟಿಂಗ್ ಭರಾಟೆ.. ಚನ್ನಪಟ್ಟಣ ರಿಸಲ್ಟ್ ಮೇಲೆ ಹಣ, ವಾಹನ ಬಾಜಿ ಕಟ್ತಿರೋ ಜನರು..!