ಬಿಗ್ ಬಾಸ್ ಕನ್ನಡ 11ರ ಮನೆಯಲ್ಲಿ ಮನೆಗೆ ಬಂದ ಎರಡು ವಾರದಲ್ಲೇ ಎರಡು ಬಾರಿ ಹನುಮಂತ ಅವರು ಕ್ಯಾಪ್ಟನ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹನುಮಂತ ಅವರಿಗೆ ಬಿಗ್‌ಬಾಸ್ ಜವಾಬ್ದಾರಿ ಕೊಟ್ಟು ಮನೆಯ ಕ್ಯಾಪ್ಟನ್ ಆಗಿ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಮನೆಯ 12 ಮಂದಿ ಸದಸ್ಯರಿಗೆ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಮೊದಲ ಸುತ್ತಿನಲ್ಲಿ ಶಿಶಿರ್ ಅವರು ಹೊರಬಿದ್ದರು. ಸುರೇಶ್ ಹಾಗೂ ಮಂಜು ರೂಲ್ಸ್ ಬ್ರೇಕ್ ಮಾಡಿದ ಕಾರಣದಿಂದ ಇಬ್ಬರನ್ನು ಉಸ್ತುವಾರಿಗಳಾದ ಭವ್ಯ ಮತ್ತು ತ್ರಿವಿಕ್ರಮ್ ಹೊರಗಿಟ್ಟರು. ಈ ವೇಳೆ ರೂಲ್ ಬ್ರೇಕ್ ವಿಚಾರದಲ್ಲಿ ಮಂಜು–ತಿವಿಕ್ರಮ್ ನಡುವೆ ವಾಗ್ವಾದ ನಡೆದಿದೆ.
ಹೀಗೆ ಎಲ್ಲರನ್ನೂ ಮೀರಿಸಿ ಕಠಿಣವಾದ ಕ್ಯಾಪನ್ಸಿ ಟಾಸ್ಕ್ನಲ್ಲಿ ಗೆದ್ದು ಹನುಮಂತ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಗೆ ಬಂದ ಎರಡು ವಾರದಲ್ಲೇ ಎರಡು ಬಾರಿ ಹನುಮಂತ ಅವರು ಕ್ಯಾಪ್ಟನ್ ಆಗಿದ್ದಾರೆ. ಆ ಮೂಲಕ ದೊಡ್ಮನೆಯಲ್ಲಿ ತಮ್ಮ ಅಸಲಿ ಆಟ ಶುರು ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ.. ಭಯಭೀತರಾದ ಜನ..!