Download Our App

Follow us

Home » ಸಿನಿಮಾ » ನನ್ನ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದು ಮೂರು ನಾಮ ಹಾಕಿದವನೇ ಗುರುಪ್ರಸಾದ್..!

ನನ್ನ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದು ಮೂರು ನಾಮ ಹಾಕಿದವನೇ ಗುರುಪ್ರಸಾದ್..!

ನಿರ್ದೇಶಕ ಗುರುಪ್ರಸಾದ್ ಅವರು ಮೃತಪಟ್ಟಿದ್ದಾರೆ. ನಗರದ ಮಾದನಾಯಕನಹಳ್ಳಿ ಅಪಾರ್ಟ್​ಮೆಂಟ್​ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿರ್ದೇಶಕ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ. ನಟ, ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಸ್ಯಾಂಡಲ್​ವುಡ್​ ಮಂದಿ ಶಾಕ್​ ಆಗಿದ್ದಾರೆ. ಇನ್ನೂ, ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಬಗ್ಗೆ ನಟ, ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಜಗ್ಗೇಶ್ ಮಾತನಾಡಿ, ಗುರುಪ್ರಸಾದ್  ​ಹಾಗೂ ನನ್ನ ಪರಿಚಯ 2003ರದ್ದು. ಅ ಟೈಮ್​​ನಲ್ಲಿ ನನಗೆ ಅವರು ಮಠ ಸಿನಿಮಾದ ಕಥೆ ಹೇಳೋಕ್ಕೆ ಬಂದಿದ್ದರು. ಆಗ ನಾನು ಅಂದೆ ನನಗೆ 2004ರಲ್ಲಿ ಚುನಾವಣೆ ಇದೆ ಮತ್ತೆ ಮಾಡೋಣ ಅಂತ. ನಾನು ಚುನಾವಣೆಯಲ್ಲಿ ಸೋತೆ. ಆ ಸಮಯದಲ್ಲಿ ಮತ್ತೆ ಬಂದ್ರು, ಅವಾಗ ಅವನ ಉತ್ಸಾಹ, ಬರವಣಿಗೆ, ಅವನ ಶೈಲಿ ತುಂಬಾ ಚನ್ನಾಗಿತ್ತು. ನಂತರ ಆ ಚಿತ್ರ ಬಿಡುಗಡೆಯಾಗಿ ಬಹಳ ದೊಡ್ಡ ಯಶಸ್ಸು ಕಾಣುತ್ತೆ.

ನಂತರ ಸಿಕ್ತ  ಇದ್ದಾಗ ಆತ ಹೇಳೋದು ನಿನ್ನ ಒಬ್ಬನ ಬಗ್ಗೆ ಸಿನಿಮಾ ಮಾಡೋಣ ಅಂತ. ಆವಾಗ ನಾನು ಹೇಳಿದೆ. ನಾನು 5-6 ಸಿನಿಮಾ ಮಾಡ್ತೀನಿ ಆಮೇಲೆ ಮಾಡುವ ಅಂತ. ಆತ 3ನೇ ಕಥೆ ಹೇಳಿದಾಗ ನಿರ್ಮಾಪಕರು ಸೆಟ್ ಆಗದ ಕಾರಣ ಸಿನಿಮಾ ಮಾಡಲಿಲ್ಲ. ಆತನ ಇಂವೊಲ್ವಮೆಂಟ್ ತುಂಬಾ ಚೆನ್ನಾಗಿತ್ತು. ಹೀಗಾಗಿ, ಜಯಣ್ಣನ ಆಫೀಸಿನಲ್ಲಿ ಅದನ್ನ ಬಿಡುಗಡೆ ಮಾಡಿಸಿದೆ. ಆದರೆ, ನಾನು ಆತನ ರಿಲೀಸ್ ಮಾಡಿಸಿಕೊಟ್ಟೆ ಅಂತ ಕೋಪ ಬಂತು. ಅವನ ಮಾತು ತುಂಬಾ ಕೆಳ ಮಟ್ಟಕ್ಕೆ ಹೋದಾಗ ನಾನು ಮಾತು ಬಿಟ್ಟೆ ಎಂದರು.

ಅಲ್ಲಿಂದ ನನಗೆ ಅವನ ಕಾಟೆಕ್ಟ್​​ ಇರ್ಲಿಲ್ಲ. ನಂತರ ನಾನು ರಾಘವೇಂದ್ರ ಸ್ಟೋರ್ಸ್ ಅಂತ ಸಿನಿಮಾದ ಶೂಟಿಂಗ್​​ನಲ್ಲಿದೆ. ಅಲ್ಲಿ ಚೆನ್ನಾಗಿ ಕೆಲಸ ಮಾಡ್ಬೇಕು ಅಂತ ಹೇಳಿ ಬೇಕಾ ಮಲಗಿದ್ದೆ. ಆಗ ಯಾರೋ ಬಾಗಿ ಬಡಿದ ಸದ್ದಾಯಿತು. ಯಾರು ನೋಡಿದ್ರೆ ಇವನೇ, ಯಾಕೆ ಇಷ್ಟು ಹೊತ್ತಿಗೆ ಬಂದಿದ್ದಿಯಾ ಅಂತ ಹೇಳಿದೆ. ಶಾಸ್ತ್ರಿಗಳು ಹೇಳಿದ್ರು, ಘಳಿಗೆ ಚಿನ್ನಾಗಿದೆ ಅಂತ ಅದ್ಕೆ ಈ ಟೈಮ್​​ಗೆ ಬಂದೆ ಅಂತ ನನ್ನ ಮೆಚ್ಚಿಸೋಕೆ ಏನೋ ಹೇಳಿದ. 10 ಲಕ್ಷ ಅಡ್ವಾನ್ಸ್​​ ಕೊಟ್ಟ, ನಂತರ ನಾನು ಹೇಳಿದೆ. ನೀನು ಹೋಗು ನಾನು ನಾಳೆ ಬಂದು ಕಥೆ ಹೇಳ್ತೀನಿ ಅಂತ. ಆಗ ಆತ ಹೇಳಿದ ಕಥೆ ಏನು ಕೇಳ್ಬೇಡಿ ಕಣ್ಣು ಮುಚ್ಚಿ ಸಿನಿಮಾ ಮಾಡಿ ಅಂತ ಹೇಳಿ ಅವತ್ತು ನನ್ನ ತಲೆಗೆ ಚಪ್ಪಡಿ ಕಲ್ಲು ಹಾಕಿದ. ನನಗೆ ಗೊತ್ತಾಗಿಲ್ಲ ಎಂದಿದ್ದಾರೆ.

ಅದರಲ್ಲಿ 3 ಸಾಂಗ್​​ ಇತ್ತು ಅದನ್ನು ಮುಗಿಸಿದ್ವಿ, ಅರಮನೆ ಸೆಟ್​​ ಹಾಕಿದ್ರು, ನನಗೆ ಸೆಟ್​ಗೆ ಬಂದ್ಮೇಲೆ ಗೊತ್ತಾಯಿತು ಇವನು ಏನು ಬರ್ಕೊಂಡು ಬರಲಿಲ್ಲ ಅಂತ. ದಿನ ಸೆಟ್​ಗೆ ಬರೋದು, ಊಟ ಮಾಡೋದು, ಮಲಗೋದು ಅಷ್ಟೇ ಮಾಡುತ್ತಿದ್ದ. ಅವಾಗ ನಾನೇ 25 ಸೀನ್ ಬರ್ದು ಕೊಟ್ಟಿದ್ದೆ. ಅದಾದ ಬಳಿಕ ಡಬ್ಬಿಂಗ್ ಅಲ್ಲಿ ಸಿಕ್ಕಿದ್ದ. ಅಲ್ಲೂ ಬರೀ ನನ್ನ ಕ್ಯಾರೆಕ್ಟರ್ ಅಷ್ಟೇ ಇತ್ತು. ಅಲ್ಲಿ ನಿರ್ಮಾಪಕರ ಜೊತೆ ಜಗಳ ಬಂತು. ಅದಕ್ಕಿಂತ ಮುಂಚೆ ಒಂದು ಪ್ರೆಸ್ ಮೀಟ್ ಇತ್ತು. ಅಲ್ಲಿ ಸಮಾಧಾನಕರ ಮಾತುಗಳು ಇರಲಿಲ್ಲ. ಆದ್ದರಿಂದ ಇಲ್ಲಿ ಏನೋ ಆಗುತ್ತೆ ಅಂತ ನನಗೆ ಅನಿಸಿದ್ದರಿಂದ ನಾನು ಮೊದ್ಲೇ ಹೊರಟು ಹೋದೆ. ಅವನಿಂದ ನನಗೆ ಕೆಟ್ಟ ಪದಗಳ ಬಳಕೆ ಆಯ್ತು ಎಂದು ತಿಳಿಸಿದರು. 

ಇದನ್ನೂ ಓದಿ : ನಿರ್ದೇಶಕ ಗುರುಪ್ರಸಾದ್ ಮೃತದೇಹ ಶಿಫ್ಟ್‌ ಆಗುತ್ತಿದ್ದಂತೆ, ಪೊಲೀಸರಿಗೆ ದೂರು ನೀಡಿದ ಪತ್ನಿ..!

 

 

 

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here