ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು. ಈ ಬಗ್ಗೆ ಇದೀಗ ವಿಪಕ್ಷ ನಾಯಕ ಆರ್ಅಶೋಕ್ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಗೆ ಸಿಎಂ ಪುಡಾರಿ ಪದ ಬಳಸಿದ್ದು ತಪ್ಪು. ಗ್ಯಾರಂಟಿ ಯೋಜನೆ ವಿರೋಧಿಸಿದ್ದು ಕಾಂಗ್ರೆಸ್ನವರೇ, ಅವರದ್ದೇ ಪಕ್ಷದ ಮಂತ್ರಿಗಳು, ಶಾಸಕರು ಗ್ಯಾರಂಟಿ ಅಪಸ್ವರ ಎತ್ತಿದ್ರು ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಆರ್.ಅಶೋಕ್ ಮಾತನಾಡಿ, ಡಿಸಿಎಂ ಡಿಕೆಶಿ ಹೇಳಿಕೆ ಕೊಟ್ಟ ಮೇಲೆ ಪ್ರಧಾನಿ ಟ್ವೀಟ್ ಮಾಡಿದ್ದು. ಮೊದಲು ಸಿದ್ದು ತಮ್ಮ ಸಚಿವರು, ಶಾಸಕರನ್ನು ಹಿಡಿತದಲ್ಲಿಡಲಿ, ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದಿದ್ದಾರೆ.
ಗುಂಡಿ ಇಲ್ಲದ ಒಂದೇ ಒಂದು ರಸ್ತೆಯಲ್ಲಿ ಕಾಂಗ್ರೆಸ್ ನಾಯಕರು ತೋರಿಸಲಿ, ಗುಂಡಿ ಇಲ್ಲದ ರಸ್ತೆ ತೋರಿಸಿದರೆ ನಿಮಗೆ ನೋಬೆಲ್ ಪ್ರಶಸ್ತಿ ಕೊಡುತ್ತೇವೆ. ನಿಮ್ಮ ಗ್ಯಾರಂಟಿಗಳು ಅವೈಜ್ಞಾನಿಕ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಇದನ್ನೂ ಓದಿ : ರಾಜ್ಯಾದ್ಯಂತ ‘ಬಘೀರ’ನ ಭರ್ಜರಿ ಪ್ರದರ್ಶನ – ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ ನಟ ಪ್ರಭಾಸ್..!