ತಿರುಪತಿ : ತಿರುಪತಿ ದೇವಸ್ಥಾನದ ಪವಿತ್ರ ಪ್ರಸಾದವಾದ ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬು ಬಳಸಲಾಗಿದೆ ಎನ್ನುವ ವಿಷಯ ಮುನ್ನೆಲೆಗೆ ಬಂದ ಬೆನ್ನಲ್ಲೇ ತಿರುಪತಿ ದೇವಸ್ಥಾನದ ಶುದ್ಧೀಕರಣದ ಬಗ್ಗೆಯೂ ಹೆಚ್ಚು ಚರ್ಚೆಯಾಗಿತ್ತು.
ಇದೀಗ ಆಂಧ್ರಪ್ರದೇಶದ ಸರ್ಕಾರವೇ ಶುದ್ಧೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ದೇಗುಲದಲ್ಲಿ ಮಹಾ ಶುದ್ಧೀಕರಣ ಕಾರ್ಯ ಕೈಗೊಂಡಿದೆ. ಕೊಬ್ಬಿನ ಲಡ್ಡುವಿನಿಂದ ಅಪವಿತ್ರ ಹಿನ್ನೆಲೆ ತಿರುಮಲದಲ್ಲಿ ಶುದ್ಧೀಕರಣ ಕಾರ್ಯ ಈಗಾಗಲೇ ಶುರುವಾಗಿದೆ.
ಶಾಂತಿ ಹೋಮದ ಜೊತೆಗೆ ಮಹಾ ಸಂಪ್ರೋಕ್ಷಣೆ ನಡೆಯುತ್ತಿದ್ದು, ದೇವಸ್ಥಾನದಲ್ಲಿ ಮುಂಜಾನೆಯಿಂದ ಬೆಳಗ್ಗೆ 10 ಗಂಟೆವರೆಗೆ ಹೋಮ ಹವನ ನಡೆಯಲಿದೆ. ವೈದಿಕರು, ತಿರುಪತಿ ತಿರುಮಲದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಚಿನ್ನದ ಬಾವಿ(ಬಂಗಾರು ಬಾವಿ) ಬಳಿಯ ಯಾಗ ಶಾಲೆಯಲ್ಲಿ ಹೋಮ ಹವನ ನಡೆಯುತ್ತಿದ್ದು, ಮಹಾ ಸಂಪ್ರೋಕ್ಷಣೆ ಹೆಸರಿನಲ್ಲಿ ಶುದ್ಧೀಕರಣ ಕಾರ್ಯ ಮಾಡಲಾಗುತ್ತಿದೆ. ಆಗಮಿಕರು ಪಂಚಗವ್ಯಗಳನ್ನು ಬಳಸಿ ಶುದ್ಧೀಕರಣ ಮಾಡ್ತಿದ್ದಾರೆ.
ಶುದ್ಧೀಕರಣದಿಂದ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತೆ, ಆಧ್ಯಾತ್ಮಿಕ ಶಾಂತಿ ಸಿಗುತ್ತೆ, ಸಮೃದ್ದಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. 1950ರಲ್ಲಿ ಒಮ್ಮೆ ತಿರುಪತಿಯಲ್ಲಿ ಇದೇ ರೀತಿ ಮಹಾ ಸಂಪ್ರೋಕ್ಷಣೆ ಆಗಿತ್ತು.
ಇದನ್ನೂ ಓದಿ : ಶಿರೂರು ಗುಡ್ಡ ಕುಸಿತ ದುರಂತ : 3ನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಮೂಳೆ, ಲಾರಿ ಇಂಜಿನ್ ಪತ್ತೆ..!