ಬೆಂಗಳೂರು : ಕರುನಾಡು ಸೇರಿ ಇಡೀ ಜಗತ್ತೇ ಹೊಸ ವರ್ಷವನ್ನು ಅದ್ಧೂರಿಯಿಂದ ಸ್ವಾಗತಿಸಿ ಸಂಭ್ರಮಿಸಿದೆ. ಸಾವಿರಾರು ಖುಷಿ, ಬೇಸರದ 2024ಕ್ಕೆ ಗುಡ್ ಬೈ ಹೇಳಿ, ಕೋಟಿ ಕೋಟಿ ಕನಸಿನ 2025ರ ವರ್ಷಕ್ಕೆ ಹಾಯ್.. ಹಾಯ್ ಎಂದು ಸಂಭ್ರಮದಿಂದ ವೆಲ್ಕಮ್ ಮಾಡಿದೆ. ಬೆಂಗಳೂರು ಸೇರಿ ಹಲವೆಡೆ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ.
ಕರಾವಳಿ ನಗರಿಯಿಂದ ಹಿಡಿದು ಅರಮನೆ ನಗರಿವರೆಗೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಕುಣಿದು, ಕುಪ್ಪಳಿಸಿ ಹೊಸ ವರ್ಷವನ್ನ ಸ್ವಾಗತ ಮಾಡಿದ ಜನ ಹಳೆ ವರ್ಷಕ್ಕೆ ವಿದಾಯ ಹೇಳಿದ್ದಾರೆ.
ಅರಮನೆ ನಗರಿ ಮೈಸೂರಲ್ಲಿ ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ : ಅರಮನೆ ನಗರಿ ಮೈಸೂರಿನ ಜನ ಹೊಸ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಿದರು. 2024ರ ಕೊನೆ ಸೂರ್ಯಾಸ್ತವನ್ನ ಕಣ್ತುಂಬಿಕೊಂಡ ಜನರು ಕತ್ತಲಾಗ್ತಿದ್ದಂತೆ ರಂಗು ರಂಗಿನ ಬೆಳಕಿನ ಮಧ್ಯೆ ರಂಗಪ್ರವೇಶ ಮಾಡಿದರು. ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿ ಕೇಕ್ ಕತ್ತರಿಸಿ ಹೊಸ ವರ್ಷವನ್ನ ಸ್ವಾಗತಿಸಿದರು.
ಕಡಲತಡಿಯಲ್ಲಿ ಹೊಸವರ್ಷದ ಕಲರ್ ಫುಲ್ ಕಲರವ : ಕಡಲತಡಿ ಮಂಗಳೂರಿನಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಖತ್ ಸ್ಟೆಪ್ಸ್ ಹಾಕಿದ ಜನ ಸಮುದ್ರದ ಅಲೆಗಳಂತೆ ಹಾರುತ್ತಾ, ಏರುತ್ತಾ ಹಬ್ಬ ಮಾಡಿದರು. ರಾತ್ರಿ ಗಂಟೆ 12 ಆಗುತ್ತಿದ್ದಂತೆ ಕೇಕ್ ಕತ್ತರಿಸಿ ಕೇಕೆ ಹಾಕಿದ ಜನ 2025ನ್ನ ರೆಡ್ ಕಾರ್ಪೆಟ್ ಹಾಸಿ ವೆಲ್ಕಮ್ ಮಾಡಿದರು.
ಹುಬ್ಬಳ್ಳಿಯಲ್ಲೂ ಹೊಸ ವರ್ಷದ ಸೆಲೆಬ್ರೇಷನ್ : ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲೂ ಹೊಸ ವರ್ಷದ ಸೆಲೆಬ್ರೇಷನ್ ಹಾವಳಿ ಜೋರಾಗಿತ್ತು. ಹಾಡು, ಡ್ಯಾನ್ಸ್ನೊಂದಿದೆ ಹೊಸ ವರ್ಷವನ್ನ ವೆಲ್ಕಮ್ ಮಾಡಿದ ಜನ, ರಾತ್ರಿ ಹೊಸ ಪ್ರಪಂಚದಲ್ಲೇ ಮಿಂದೆದ್ದರು. ಕಲರ್ ಕಲರ್ ಲೈಟ್ಗಳ ಮಧ್ಯೆ ಮೈ ಬಳುಕುಸಿದ ಚೆಂದುಳ್ಳಿ ಚೆಲುವೆಯರು, ಚಂದ ಚಂದದ ಸ್ಟೆಪ್ಸ್ ಹಾಕಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಸಡಗರ : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಹೊಸ ವರ್ಷದ ಸಂಭ್ರಮ, ಸಡಗರ ಜೋರಾಗಿತ್ತು. ಕುಣಿದು, ಕುಪ್ಪಳಿಸಿ ಹೊಸ ವರ್ಷಕ್ಕೆ ಕೇಕ್ ಕತ್ತರಿಸಿ, ಹಾಯ್ ಹೇಳಿದರು.
ಬೆಳಗಾವಿ, ಹಾಸನದಲ್ಲೂ ನ್ಯೂ ಇಯರ್ಗೆ ಅದ್ದೂರಿ ಸ್ವಾಗತ : ಹಾಸನದಲ್ಲೂ ಹೊಸ ವರ್ಷದ ಹೊನಲು ಹರಿದಿತ್ತು. ಕಳೆದ ರಾತ್ರಿ ಡಿಜೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಜನರು, ಎಂಜಾಯ್ ಮಾಡಿದರು. ಬೆಳಗಾವಿಯಲ್ಲೂ ಹೊಸ ವರ್ಷವನ್ನ ಭರ್ಜರಿಯಲ್ಲಿ ಸ್ವಾಗತಿಸಲಾಯಿತು. ಕಲರ್ ಕಲರ್ ಬಟ್ಟೆ ತೊಟ್ಟು, ಕಲರ್ ಫುಲ್ ಸಾಂಗ್ಗೆ ಸ್ಟೆಪ್ಸ್ ಹಾಕಿದ ಜನ ಫುಲ್ ತ್ರಿಲ್ ತಗೊಂಡರು. ಉಡುಪಿಯಲ್ಲೂ ಹೊಸ ವರ್ಷವನ್ನ ಸಖತ್ ಆಗಿ ಸ್ವಾಗತ ಮಾಡಲಾಯಿತು.
ಇದನ್ನೂ ಓದಿ : ‘ನ್ಯೂ ಇಯರ್’ ಸೆಲೆಬ್ರೇಷನ್ ವೇಳೆ ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಯುವಕನಿಗೆ ಬಿತ್ತು ಗೂಸಾ..!