Download Our App

Follow us

Home » ಅಪರಾಧ » ಕಾಮಗಾರಿ ಬಿಲ್ ಬಿಡುಗಡೆಗೆ ಲಂಚಕ್ಕೆ ಬೇಡಿಕೆ – ಮಂಡ್ಯದಲ್ಲಿ ರೆಡ್​​ಹ್ಯಾಂಡ್​​ ಆಗಿ ‘ಲೋಕಾ’ ಬಲೆಗೆ ಬಿದ್ದ ಗ್ರಾ.ಪಂ ಸದಸ್ಯ..!

ಕಾಮಗಾರಿ ಬಿಲ್ ಬಿಡುಗಡೆಗೆ ಲಂಚಕ್ಕೆ ಬೇಡಿಕೆ – ಮಂಡ್ಯದಲ್ಲಿ ರೆಡ್​​ಹ್ಯಾಂಡ್​​ ಆಗಿ ‘ಲೋಕಾ’ ಬಲೆಗೆ ಬಿದ್ದ ಗ್ರಾ.ಪಂ ಸದಸ್ಯ..!

ಮಂಡ್ಯ : ಶೌಚಾಲಯ ಕಾಮಗಾರಿಯ ಬಿಲ್ ಪಾಸ್ ಮಾಡಿಕೊಡಲು ₹50,000 ಲಂಚ ಪಡೆಯುತ್ತಿದ್ದ ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್‌ಕುಮಾರ್ ರೆಡ್​ ಹ್ಯಾಂಡ್​​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಡ್ಯ ತಾಲ್ಲೂಕಿನ ಕೋಲಕಾರನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ₹5.50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಗುತ್ತಿಗೆದಾರ ಚನ್ನಬಸವೇಗೌಡ ಅವರು ಬಿಲ್ ಪಾಸ್ ಮಾಡಿಕೊಡಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್‌ಕುಮಾರ್  50 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು.

ಆ ಬಳಿಕ ಬಿಲ್ ಪಾಸ್ ಮಾಡಿಕೊಡಲು ₹50 ಸಾವಿರ ಲಂಚ ಕೇಳುತ್ತಿದ್ದಾರೆ ಎಂದು ಚನ್ನಬಸವೇಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಡ್ಯ ನಗರದ ಕೆಫೆಯೊಂದರಲ್ಲಿ ಲಂಚ ಪಡೆಯುವಾಗ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್‌ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಇನ್ನು ಅನಿಲ್​ ಲಂಚ ಪಡೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಂಚದ ಹಣ ಎಣಿಸುವಾಗ ಹಣದ ಮೇಲಿದ್ದ ಪೌಡರ್ ಕಂಡು ಅನಿಲ್​ಗೆ ಡೌಟ್ ಬಂದಿತ್ತು. ಈ ವೇಳೆ ಹಣ ಬಿಟ್ಟು ಕೈತೊಳೆದುಕೊಳ್ಳಲು ಅನಿಲ್ ಓಡಿದ್ದ. ಕೂಡ್ಲೇ ಅನಿಲ್​​ನನ್ನು ಲೋಕಾಯುಕ್ತ ಪೊಲೀಸರು ಹಿಡಿದ್ದಾರೆ. ಡಿವೈಎಸ್ಪಿ ಸುನಿಲ್‌ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಜಯರತ್ನಾ, ಸಿಬ್ಬಂದಿಗಳಾದ ಮಹದೇವಸ್ವಾಮಿ, ಶಂಕರ್, ಶರತ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್ – ಬೀದರ್‌, ಹಾವೇರಿ, ಧಾರವಾಡ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ರೇಡ್​..!

Leave a Comment

DG Ad

RELATED LATEST NEWS

Top Headlines

ಕೋವಿಡ್ ಹಗರಣದ ತನಿಖೆಗೆ SIT ರಚನೆ – ಅರೆಸ್ಟ್ ಆಗ್ತಾರಾ ಹಾರ್ಟ್ ಡಾಕ್ಟರ್ ಸಿಎನ್​ ಮಂಜುನಾಥ್?

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ ಎನ್ನಲಾಗಿರುವ ಬಗ್ಗೆ ಈಗಾಗಲೇ ನಿವೃತ್ತ ನ್ಯಾ. ಮೈಕಲ್ ಡಿ ಕುನ್ಹಾ ಆಯೋಗವು ಮಧ್ಯಂತರ ವರದಿ ನೀಡಿದ್ದು,

Live Cricket

Add Your Heading Text Here