ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿಗೆ ಶಿವಮೊಗ್ಗದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸ್ವಾಮಿ ವಿವೇಕಾನಂದ ಜನ್ಮದಿನದ ಹಿನ್ನೆಲೆ ವಿನೋಬಾ ನಗರದ ಫ್ರೀಡಂ ಪಾರ್ಕ್ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.
ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿ ನೂರಾರು ಗಣ್ಯರು ಭಾಗಿಯಾಗಲಿದ್ದಾರೆ. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಹಾವೇರಿ ಸೇರಿ ಹಲವು ಜಿಲ್ಲೆಗಳಿಂದ ಫಲಾನುಭವಿಗಳು & ಕಾಂಗ್ರೆಸ್ ಅಭಿಮಾನಿಗಳು ಭಾಗಿಯಾಗಲಿದ್ದಾರೆ.
2022-23ರಲ್ಲಿ ಪದವಿ ಪಾಸ್ ಆಗಿ ಉದ್ಯೋಗ ಇಲ್ಲದವರಿಗೆ ಮಾಸಿಕ 3 ಸಾವಿರ ರೂಪಾಯಿ, ಡಿಪ್ಲೊಮಾ ಉತ್ತೀರ್ಣರಾದವರಿಗೆ 1,500 ರೂಪಾಯಿ ಖಾತೆಗೆ ಜಮೆ ಆಗಲಿದೆ. ಎರಡು ವರ್ಷಗಳವರೆಗೂ ನಿರುದ್ಯೋಗ ಭತ್ಯೆ ಸಿಗಲಿದ್ದು ಇಲ್ಲಿವರೆಗೆ 61,700 ಮಂದಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿದ್ದಾರೆ.
ಇದನ್ನೂ ಓದಿ : ಲಂಚ ಕೊಡಲು ಬಂದ ಕಾಂಟ್ರ್ಯಾಕ್ಟರ್ ಲೋಕಾ ಬಲೆಗೆ..
Post Views: 81