ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವ ತೀರ್ಮಾವೊಂದನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಹಿಂದೆ ಬಿಬಿಎಂಪಿಯನ್ನು ಮೂರು ವಿಭಾಗಗಳಾಗಿ ವಿಂಗಡನೆ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು.
ಆದರರೆ ಈ ಸಭೆಯಲ್ಲಿ ಬಿಬಿಎಂಪಿಯನ್ನು ಐದು ಭಾಗಗಳಾಗಿ ವಿಂಗಡಿಸಲು ತೀರ್ಮಾನಿಸಲಾಗಿದೆ. ಅದನ್ನ ಸುಪ್ರೀಂಕೋರ್ಟ್ ಗಮನಕ್ಕೆ ತರಲು ಸರ್ಕಾರ ನಿರ್ಧಾರ ಮಾಡಿದೆ. ಬಿಬಿಎಂಪಿ ವಿಂಗಡಣೆ ಬಳಿಕ ಬಿಬಿಎಂಪಿ ಚುನಾವಣಾ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಇದೇ ವೇಳೆ ಬೃಹತ್ ಬೆಂಗಳೂರು ವಿಭಜನೆಗೆ ಸರ್ಕಾರ ಮತ್ತೆ ಕೈಹಾಕಿದ್ದು, ಕಾನೂನು ಅಡೆತಡೆಗಳ ಬಗ್ಗೆ ಸಭೆಯಲ್ಲಿ ನಾಯಕರು ಚರ್ಚಿಸಿದ್ದಾರೆ. ಬಿಬಿಎಂಪಿ ಚುನಾವಣೆ ನಡೆದ ಬಳಿಕ ವಿಭಜನೆ ಮಾಡುವುದರ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚರ್ಚಿಸಿದ್ದಾರೆ. ಬಿಬಿಎಂಪಿ ಚುನಾವಣೆ ಮುನ್ನ ಅಥವಾ ಬಳಿಕ ವಿಭಜನೆ ಕೈಹಾಕಿರುವ ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತಂದು ಮುಂದುವರೆಯಲು ತೀರ್ಮಾನಕ್ಕೆ ಬರಲಾಗಿದೆ.
ಇದನ್ನೂ ಓದಿ : ಯುವ ರಾಜ್ಕುಮಾರ್ಗೆ ಡಿವೋರ್ಸ್ ಕೊಡಲ್ಲ ಅಂತ ಪಟ್ಟು ಹಿಡೀತಾರಾ ಶ್ರೀದೇವಿ? ದೊಡ್ಮನೆ ಸೊಸೆ ಹೇಳಿದ್ದೇನು ಗೊತ್ತಾ?
Post Views: 50