ಬಾಗಲಕೋಟೆ : ಗೂಡ್ಸ್ ವಾಹನವೊಂದು ರಸ್ತೆಗೆ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ರಬಕವಿ ಹನಗಂಡಿ ಗ್ರಾಮದ ಬಳಿ ನೆಡೆದಿದೆ. ಸ್ಟೇರಿಂಗ್ ಕಟ್ಟಾಗಿ ಬ್ಯಾಟರಿಗಳು ತುಂಬಿದ ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ ರಸ್ತೆ ತುಂಬ ಬ್ಯಾಟರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ವಾಹನದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಯಲಹಂಕ ಡಬಲ್ ಮರ್ಡರ್ ಕೇಸ್ – ಆರೋಪಿಗಳ ಎನ್ಕ್ವೈರಿಯಲ್ಲಿ ಲವ್ ಕಹಾನಿ ಬಯಲು..!
Post Views: 152