ಕಲರ್ಸ್ ಕನ್ನಡ ವಾಹಿನಿ ಸದಾ ಹೊಸ ಬಗೆಯ ಕಥೆಗಳನ್ನು ತೆರೆದಿಡೋದ್ರಲ್ಲಿ ಯಾವಾಗಲೂ ಮುಂದು. ಇದೀಗ ಕಲರ್ಸ್ ಕನ್ನಡ ಸೀರಿಯಲ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ವೀಕೆಂಡ್‌ನಲ್ಲಿ ಧಾರಾವಾಹಿಗಳಿಗೆ ಬ್ರೇಕ್ ಇರುತ್ತಿತ್ತು. ಈ ವೇಳೆ ಸೀರಿಯಲ್ ಪ್ರೇಮಿಗಳು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇನ್ಮೇಲೆ ಜನಪ್ರಿಯ ಧಾರಾವಾಹಿಗಳು ವಾರದ ಏಳು ದಿನಗಳು ಪ್ರಸಾರವಾಗಲಿದೆ.
ಹೌದು, ಕಲರ್ಸ್ ಕನ್ನಡ ತನ್ನ ವೀಕ್ಷಕರಿಗೆ ಈ ಖುಷಿ ವಿಷಯವನ್ನು ತಿಳಿಸುವುದಕ್ಕೆ ಪ್ರೋಮೊವೊಂದನ್ನು ಬಿಡುಗಡೆ ಮಾಡಿದೆ. ಧಾರಾವಾಹಿಗಳನ್ನು ವಾರ ಪೂರ್ತಿ ಪ್ರಸಾರ ಮಾಡುವ ನಿರ್ಧಾರವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದೆ.
ಶ್ರೀ ಗೌರಿ, ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ನಿನಗಾಗಿ, ದೃಷ್ಟಿ ಬೊಟ್ಟು, ಕರಿಮಣಿ, ಹೀಗೆ ವೀಕ್ಷಕರು ತಮ್ಮ ಇಷ್ಟದ ಸೀರಿಯಲ್‌ವನ್ನು ವಾರ ಪೂರ್ತಿ ನೋಡಬಹುದಾಗಿದೆ. ಇದೀಗ ಫ್ಯಾನ್ಸ್ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಟೆಲಿವಿಷನ್ ರೇಟಿಂಗ್ಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ ಕಿಚ್ಚ ಸುದೀಪ್ ನಡೆಸಿಕೊಡುವ ಸಂಚಿಕೆಗಳು 9 ಗಂಟೆಗೆ ಟೆಲಿಕಾಸ್ಟ್ ಆಗಲಿದೆ. ಹೀಗಾಗಿ, ‘ರಾಮಾಚಾರಿ’ ಸೀರಿಯಲ್ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವುದಿಲ್ಲ. ‘ರಾಮಾಚಾರಿ’ ಬಿಟ್ಟು ಉಳಿದೆಲ್ಲಾ ಧಾರಾವಾಹಿಗಳನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನೀವು ಪ್ರತಿದಿನ ವೀಕ್ಷಿಸಬಹುದು.
ಇದನ್ನೂ ಓದಿ : ಮರಕುಂಬಿ ಪರಿಶಿಷ್ಟರ ಮೇಲೆ ದೌರ್ಜನ್ಯ ಕೇಸ್ - ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಜಾಮೀನು ಮಂಜೂರು..!