ಬೆಂಗಳೂರು : ಸೀರೆ ಯಾರಿಗೆ ಇಷ್ಟ ಇಲ್ಲಾ ಹೇಳಿ, ಹೆಣ್ಣಮಕ್ಕಳಿಗಂತೂ ಸೀರೆ ಅಂದ್ರೆ ಅಚ್ಚುಮೆಚ್ಚು. ಇನ್ನು, ಹುಡುಗರು ತಮ್ಮ ತಾಯಿಗೆ, ಅಕ್ಕ-ತಂಗಿಯರಿಗೆ ಪ್ರೀತಿಸಿದವರಿಗೆ ಗಿಫ್ಟ್ ಕೊಡೋಕೆ ಒಳ್ಳೆ ಒಳ್ಳೆ ಸೀರೆಯನ್ನ ಹುಡುಕಿ ಸೂಪರ್ ಡೂಪರ್ ಗಿಫ್ಟ್ ಕೊಡ್ತಾರೆ. ಇದ್ರಂತೆ ಸೆಲಬ್ರೆಟಿಗಳು ಧರಿಸಿರೋ ಸೀರೆ ನೋಡಿ ಅದೇ ತರ ಸೀರೆಯನ್ನ ತೆಗೆದುಕೊಳ್ಳೋಕೆ ಗೂಗಲ್ನಿಂದ ಹಿಡಿದು ಅಂಗಡಿ ಅಂಗಡಿಗಳಲ್ಲಿ ಹುಡುಕುತ್ತಾರೆ. ಇನ್ನು ಕೆಲವರು ಬೇರೆ ಊರುಗಳಲ್ಲಿ ಬೇರೆ ರಾಜ್ಯಗಳಲ್ಲಿ ಸೀರೆ ಸಿಗುತ್ತೆ ಅಂತ ಗೊತ್ತಾದ್ರೆ ಸಾಕು ಫ್ಲೈಟ್ನಲ್ಲಿ ಹೋಗಿ ತೆಗೆದುಕೊಳ್ತಾರೆ. ಅಷ್ಟರಮಟ್ಟಿಗೆ ಸೀರೆ ಕ್ರೇಜ್ ಇದೆ. ಹೆಣ್ಣು ಮಕ್ಕಳಿಗೆ ಇತ್ತಿಚೆಗೆ ಸೀರೆಯಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿರೋ ಅಂಬಾನಿ ಪ್ರೀತಿಯ ಮಡದಿ ನೀತಾ ಅಂಬಾನಿ ಧರಿಸಿರೋ ಸೀರೆ.
ಹೌದು, ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನೆಗೆ ನೀತಾ ಅಂಬಾನಿ ಬರೋಬರಿ 3 ರಿಂದ 5 ಲಕ್ಷದ ಗೋಲ್ಡನ್ ಕಲರ್ ಕಾಂಜೀವರಂ ಸಿಲ್ಕ್ ಸೀರೆಗೆ ಗ್ರೀನ್ ಕಲರ್ ಜ್ಯುವೆಲರಿ ಧರಿಸಿ ಮಿಂಚಿದ್ರು. ಈ ಸೀರೆ ಸದ್ಯ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ. ಇದೇ ತರ ಸೀರೆಯನ್ನ ಕಾಂಜೀವರಂನಿಂದ ಹಿಡಿದು ಗೂಗಲ್ನಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡಿ ಬುಕ್ ಮಾಡಿಕೊಳ್ತಿದ್ದಾರೆ. ವಿಶೇಷ ಅಂದ್ರೆ ಈಗ ಇದೇ ಕಾಂಜೀವರಂ ಸೀರೆ ನಮ್ಮ ಬೆಂಗಳೂರಿನಲ್ಲಿ ಸಿಗುತ್ತೆ. ಅಯ್ಯೋ ಈ ಸೀರೆಗೆ 3 ರಿಂದ 5 ಲಕ್ಷ ರೂಪಾಯಿ ನಾವು ಹೇಗೆ ತೆಗೆದುಕೊಳ್ಳೋದು ಅಂತ ಯೋಚನೆ ಮಾಡ್ತಿದ್ದೀರಾ..?
ಬೆಂಗಳೂರಿನ ರಾಜಾಜಿನಗರದ ಪವಿತ್ರ ಪ್ಯಾರಡೈಸ್ ಪಕ್ಕದಲ್ಲಿರೋ ರಾಧ್ಯಾ ಸೀರೆ ಶಾಪ್ನಲ್ಲಿ ನೀತಾ ಅಂಬಾನಿ ಧರಿಸಿರೋ ಗೋಲ್ಡನ್ ಕಲರ್ ಕಾಂಜೀವರಂ ಸೀರೆ ಸಿಗುತ್ತೆ. ಈ ಸೀರೆಯ ಬೆಲೆ ಕೇವಲ 3 ಸಾವಿರದಿಂದ 5 ಸಾವಿರದೊಳಗೆ ಇದೆ. ಮಧ್ಯಮ ವರ್ಗದವರಿಂದ ಹಿಡಿದು ಹೈಫೈ ಫ್ಯಾಮಿಲಿಯವರು ಈ ಸೀರೆಯನ್ನ ಕೊಂಡುಕೊಳ್ಳಬಹುದು. ಅಷ್ಟು ಕಡಿಮೆ ಬೆಲೆಗೆ ಈ ಗೋಲ್ಡನ್ ಕಲರ್ ಕಾಂಜೀವರಂ ಸೀರೆ ಸಿಗುತ್ತೆ.
ಈಗಾಗಲೇ ರಾಧ್ಯಾ ಸೀರೆ ಅಂಗಡಿಯಲ್ಲಿ ಬೇರೆ ಬೇರೆ ಸೆಲಬ್ರೆಟಿಗಳು ಧರಿಸಿರೋ ಸೀರೆ ಸಹ ಸಿಗುತ್ತಿದೆ. ಈಗಾಗಲೇ ನೀತಾ ಅಂಬಾನಿ ಧರಿಸಿರೋ ಸೀರೆ ಬರೋಬರಿ 300ಕ್ಕೂ ಹೆಚ್ಚು ಸೀರೆಗಳು ಸೇಲ್ ಆಗಿದೆ. ದಿನಕ್ಕೆ 30 ರಿಂದ 40 ಸೀರೆಗಳು ಸೇಲ್ ಆಗ್ತಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಊರುಗಳಿಂದ ರಾಧ್ಯಾ ಸೀರೆ ಶಾಪ್ಗೆ ಭೇಟಿಕೊಟ್ಟು ನೀತಾ ಅಂಬಾನಿ ಧರಿಸಿರೋ ಗೋಲ್ಡನ್ ಕಲರ್ ಸೀರೆಯನ್ನ ಖುಷಿಯಿಂದ ತೆಗೆದುಕೊಂಡು ಹೋಗ್ತಿದ್ದಾರೆ. ನೀತಾ ಅಂಬಾನಿ ಧರಿಸಿರೋ ಗೋಲ್ಡನ್ ಕಲರ್ ಸೀರೆ ಜೊತೆಗೆ ದೀಪಿಕಾ ಪಡುಕೋಣೆ ಇತ್ತಿಚೆಗೆ ಕಾರ್ಯಕ್ರಮಕ್ಕೆ ಧರಿಸಿರೋ ವೈಟ್ ಕಲರ್ ಪ್ಯೂರ್ ಕಾಟನ್ ಸೀರೆ ಸಹಾ ಲಾಂಚ್ ಆಗಿದೆ. ಇದ್ರ ಬೆಲೆ ಬರೋಬ್ಬರಿ 50 ಸಾವಿರ. ಆದ್ರೆ, ರಾಧ್ಯಾ ಸೀರೆ ಅಂಗಡಿ ಮಾಲೀಕಿ ಪೂಜಾ ಹೆಣ್ಣು ಮಕ್ಕಳಿಗೆ ಕೊಡ್ತಿರೋ ಬೆಲೆ ಕೇವಲ 9 ಸಾವಿರ.
ಹೆಣ್ಮಕ್ಕಳೇ.. ನಿಮ್ಮ ಫೇವರೀಟ್ ಹೀರೋಯಿನ್ ಧರಿಸಿರೋ ಸೀರೆ, ಈಗ ನಮ್ಮ ಬೆಂಗಳೂರಿನಲ್ಲಿಯೇ ಸಿಗುತ್ತೆ. ಅದ್ರಲ್ಲೂ ನೀತಾ ಅಂಬಾನಿ ಧರಿಸಿರೋ 3ಕ್ಕೂ ಹೆಚ್ಚು ಲಕ್ಷದ ಬ್ಯೂಟಿಫುಲ್ ಕಾಂಜೀವರಂ ಸೀರೆ ಈಗ ಬೆಂಗಳೂರಿನ ರಾಜಾಜಿನಗರದ ಪವಿತ್ರ ಪ್ಯಾರಡೈಸ್ ಪಕ್ಕದಲ್ಲಿರೋ ರಾಧ್ಯಾ ಸೀರೆ ಶಾಪ್ನಲ್ಲಿ ಸಿಗುತ್ತದೆ. ಬೇಗ ಬೇಗ ರಾಧ್ಯಾ ಶಾಪ್ಗೆ ಹೋಗಿ ಗೋಲ್ಡನ್ ಕಲರ್ ಕಾಂಜೀವರಂ ಸೀರೆ ಖರೀದಿಸಿ ಅಷ್ಟೇ ಬ್ಯೂಟಿಫುಲ್ ಆಗಿ ರೆಡಿಯಾಗಿ ಖುಷಿಪಡಿ.