Download Our App

Follow us

Home » ಅಪರಾಧ » MLA ಎಲೆಕ್ಷನ್​ಗೂ ಫಂಡಿಂಗ್​ ಮಾಡಿದ್ಲಾ “ಗೋಲ್ಡ್” ವಂಚಕಿ ಐಶ್ವರ್ಯಗೌಡ?

MLA ಎಲೆಕ್ಷನ್​ಗೂ ಫಂಡಿಂಗ್​ ಮಾಡಿದ್ಲಾ “ಗೋಲ್ಡ್” ವಂಚಕಿ ಐಶ್ವರ್ಯಗೌಡ?

ಬೆಂಗಳೂರು : ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ ಮಾಲೀಕರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಐಶ್ವರ್ಯ ಗೌಡ ಮತ್ತು ಪತಿ ಹರೀಶ್​​​ಗೆ ಹೈಕೋರ್ಟ್ ಜಾಮೀನು ನೀಡಿದೆ. ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ವಂಚನೆ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಕಳೆದ ದಿನ ಹೈಕೋರ್ಟ್‌ ಜಾಮೀನು ನೀಡಿದ ಬೆನ್ನಲ್ಲೆ ಆರೋಪಿಗಳನ್ನು ನಿನ್ನೆ ರಾತ್ರಿಯೇ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಈ ಬೆನ್ನಲ್ಲೇ ಇನ್ನೊಂದು ವಂಚನೆ ಕೇಸ್​ನಲ್ಲಿ ಐಶ್ವರ್ಯ ಗೌಡ, ಪತಿ ಹರೀಶ್ ಗೌಡ, ಬೌನ್ಸರ್​​ ಗಜ ಎಂಬುವರ ವಿರುದ್ಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಿಲ್ಪಾಗೌಡ ಎಂಬುವವರು ತಮಗೆ 3.25 ಕೋಟಿ ಹಣ, 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾಳೆ ಎಂದು ಆರೋಪಿಸಿ ಆರ್.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಮಳವಳ್ಳಿ ಶಾಸಕ ನರೇಂದ್ರಸ್ವಾಮಿ
         ಮಳವಳ್ಳಿ ಶಾಸಕ ನರೇಂದ್ರಸ್ವಾಮಿ

 

ಇದೀಗ ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಫಂಡ್ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಮಾಜಿ MLA ಡಾ.ಕೆ ಅನ್ನದಾನಿ ಫಂಡಿಂಗ್​ ಬಾಂಬ್​ ಸಿಡಿಸಿದ್ದು, ದೊಡ್ಡ-ದೊಡ್ಡವರ ಎಲೆಕ್ಷನ್​ಗೆ ಈಕೆ ಹಣ ಕೊಟ್ಟಿರೋ ಶಂಕೆ ವ್ಯಕ್ತವಾಗಿದೆ.

ಐಶ್ವರ್ಯಗೆ ಮಂಪರು ಪರೀಕ್ಷೆ ನಡೆಸಿದ್ರೆ ಬಂಡವಾಳ ಬಯಲಾಗುತ್ತೆ, ಈ ಕೂಡ್ಲೇ ಐಶ್ವರ್ಯ ಗೌಡ ಪ್ರಕರಣ ED ತನಿಖೆ ವಹಿಸಬೇಕು. ಕೋಟಿ ಕೋಟಿ ಗೋಲ್ಡ್ ವಂಚನೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರ ಇದೆ. ನರೇಂದ್ರಸ್ವಾಮಿ, ಡಿ.ಕೆ.ಸುರೇಶ್, ವಿನಯ್​ ಕುಲಕರ್ಣಿ ಹೆಸರು ಕೇಳಿ ಬರ್ತಿದೆ. ವರ್ತೂರ್ ಪ್ರಕಾಶ್ ಈಗಾಗಲೇ ಹಣ, ಆಭರಣ ವಾಪಸ್ ಮಾಡಿದ್ದಾರೆ. ಐಶ್ವರ್ಯಗೌಡ ಸಾಕಷ್ಟು ಬಾರಿ ಮಳವಳ್ಳಿಗೆ ಬಂದು ಹೋಗಿದ್ದಾಳೆ, ಐಶ್ವರ್ಯ ಗೌಡಗೆ MLA ಸನ್ಮಾನ ಮಾಡಿರೋ ಫೋಟೋಗಳೂ ಇವೆ. ಈ ಸರ್ಕಾರ ತನ್ನ ಪಕ್ಷದ ಮುಖಂಡರನ್ನು ರಕ್ಷಣೆ ಮಾಡುತ್ತಿದೆ, ಮಳವಳ್ಳಿ MLA-ಐಶ್ವರ್ಯ ನಡುವೆ ಹಣದ ವ್ಯವಹಾರ ನಡೆದಿದೆ. ಕಳೆದ ಎಲೆಕ್ಷನ್​​​ನಲ್ಲಿ ಐಶ್ವರ್ಯ ಫಂಡಿಂಗ್ ಮಾಡಿರೋ ಅನುಮಾನ ಇದೆ, ಐಶ್ವರ್ಯ ಗೌಡಳನ್ನು ತೀವ್ರ ವಿಚಾರಣೆ ಮಾಡಿದ್ರೆ ಎಲ್ಲಾ ಗೊತ್ತಾಗುತ್ತೆ ಎಂದು ಡಾ.ಕೆ.ಅನ್ನದಾನಿ ಮಳವಳ್ಳಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಹೊಸ ವರ್ಷದ ಪ್ರಯುಕ್ತ ಮೈಸೂರಿನ ಯೋಗಾನರಸಿಂಹ ಸ್ವಾಮಿ ದೇಗುಲಕ್ಕೆ ಭಕ್ತರ ದಂಡು.. 2 ಲಕ್ಷ ಲಡ್ಡು ವಿತರಣೆ..!

Leave a Comment

DG Ad

RELATED LATEST NEWS

Top Headlines

ಚಿಕ್ಕಬಳ್ಳಾಪುರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ‌ ಜೆಡಿಎಸ್​ ಮುಖಂಡನ ಬರ್ಬರ ಹತ್ಯೆ..!

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ತಮ್ಮನಾಯಕನಹಳ್ಳಿ ಗೇಟ್​ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಜೆಡಿಎಸ್  ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆಡಿಎಸ್​ ಮುಖಂಡ, ತಮ್ಮನಾಯಕನಹಳ್ಳಿ ಗ್ರಾಮದ ವೆಂಕಟೇಶ್ ಕೊಲೆಯಾದ ದುರ್ದೈವಿ.

Live Cricket

Add Your Heading Text Here