ದಾವಣಗೆರೆ : ಲೋಕಸಭೆ ಚುನಾವಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ, ಮದ್ಯ, ಚಿನ್ನಾಭರಣ ಸೀಜ್ ಮಾಡಲಾಗಿದೆ.
ಇದರ ಬೆನ್ನಲ್ಲೇ ಇದೀಗ ಚುನಾವಣಾಧಿಕಾರಿಗಳು ಭರ್ಜರಿ ಬಂಗಾರ ಬೇಟೆಯಾಡಿದ್ದಾರೆ. ದಾವಣಗೆರೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕೋಟಿ ಬೆಲೆಯ ಚಿನ್ನವನ್ನು ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಗರದ ಲೋಕಿಕೆರೆ ಚೆಕ್ಪೋಸ್ಟ್ನಲ್ಲಿ 12.50 ಕೋಟಿ ಮೌಲ್ಯದ ಗೋಲ್ಡ್, ಡೈಮಂಡ್ಸ್ ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ವಿವಿಧ ಆಭರಣ ಅಂಗಡಿಗಳಿಗೆ ಹಳೆ ದಿನಾಂಕಗಳನ್ನು ನಮೂದು ಮಾಡಿ ದಾಖಲೆ ಇಲ್ಲದೆ ಚಿನ್ನಾಭರಣ ಸಾಗಿಸಲಾಗುತ್ತಿತ್ತು. ಚುನಾವಣಾಧಿಕಾರಿ ರೇಣುಕಾ, ವಾಣಿಜ್ಯ ತೆರಿಗೆ ಉಪಾಯುಕ್ತ ಮಂಜುನಾಥ್ ನೇತೃತ್ವದಲ್ಲಿ ಚುನಾವಣಾಧಿಕಾರಿ ಲೋಕೇಶ್ ಮತ್ತು ಟೀಂ ಈ ಶೋಧ ಕಾರ್ಯ ನಡೆಸಿದೆ.
ರಾಮನಗರದಲ್ಲೂ ಕೋಟಿ-ಕೋಟಿ ಚಿನ್ನ ವಶಕ್ಕೆ – ಬೆಂಗಳೂರು-ಮೈಸೂರು ಹೆದ್ದಾರಿಯ ಹೆಜ್ಜಾಲ ಟೋಲ್ನಲ್ಲಿ 10 ಕೋಟಿ ಮೌಲ್ಯದ ಆಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಿಡದಿ ಬಳಿ ಇರುವ ಟೋಲ್ನ ಚೆಕ್ಪೋಸ್ಟ್ನಲ್ಲಿ ತಪಾಸಣೆ ಮಾಡುತ್ತಿರುವಾಗ ಎಲೆಕ್ಷನ್ ಟೀಂಗೆ ಅನುಮಾನ ಬಂದು ವಾಹನ ತಪಾಸಣೆ ಮಾಡಿತ್ತು. ಈ ವೇಳೆ ಸೂಕ್ತ ದಾಖಲೆ ಇಲ್ಲದ ಕಾರಣ ಬಿಡದಿ ಪೊಲೀಸರು 10 ಕೋಟಿ ಮೌಲ್ಯದ ಆಭರಣವನ್ನು ವಶಕ್ಕೆ ಪಡೆದಿದ್ದಾರೆ. ಖಾಸಗಿ ಚಿನ್ನಾಭರಣ ಕಂಪನಿಗೆ ಸೇರಿದ ಚಿನ್ನಾಭರಣ ಎಂದು ಹೇಳಲಾಗಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಪೋಟ ಕೇಸ್ : ಕೊನೆಗೂ ಶಂಕಿತ ಉಗ್ರ ಮುಜಾವಿರ್ ಹುಸೇನ್ ಅರೆಸ್ಟ್..!