ಬೆಂಗಳೂರು : ರಾಜ್ಯದಲ್ಲಿ ರಾಜಭವನದ ದುರುಪಯೋಗ ಆಗ್ತಿದೆ. ಬಿಜೆಪಿ ಶಾಸಕರು ಹೇಳಿದ ತಕ್ಷಣ ಎಲ್ಲಾ ವಾಪಸ್ ಕಳಿಸ್ತಾರೆ. ರಾಜ್ಯಪಾಲರು ಏಕಾಏಕಿ 15 ಬಿಲ್ ವಾಪಸ್ ಕಳಿಸಿದ್ದಾರೆ. ರಾಜ್ಯಪಾಲರಿಗೆ ಆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ದೆಹಲಿಗೆ ತೆರಳೋ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ಅವರು, ಏನಾದ್ರು ಇದ್ರೆ ಕ್ಲಾರಿಫಿಕೇಷನ್ ಕೇಳಬಹುದಿತ್ತು. ಎಲ್ಲಾ ಬಿಲ್ಗಳನ್ನು ತಡೆಯೋದಾದ್ರೆ ಸರ್ಕಾರ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಇನ್ನು ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನಗಳು ಫಲಿಸೋದಿಲ್ಲ. ನಾವೂ ಸುಮ್ಮನೆ ಕುಳಿತುಕೊಂಡಿಲ್ಲ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಯಾರು ಏನ್ ಪ್ರಯತ್ನ ಮಾಡಿದ್ರೂ ಏನೂ ಆಗಲ್ಲ ಎಂದು ದೆಹಲಿಗೆ ತೆರಳೋ ಮುನ್ನ ಡಿಸಿಎಂ ಡಿಕೆಶಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯನವರ ಹೆಣೆಬರಹ ನಿರ್ಧರಿಸುವ ನೂರಾರು ಪುರಾಣಗಳು ನನ್ನಲ್ಲಿವೆ – ಸಿದ್ದುಗೆ ಹೆಚ್ಡಿಕೆ ಗುದ್ದು..!
Post Views: 39