ಮಂಡ್ಯ : ಪ್ರೇಯಸಿ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿ ಭಗ್ನಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬಸವೇಶ್ವರ ನಗರದಲ್ಲಿ ನಡೆದಿದೆ. ಬಂಡೆ ಸ್ಫೋಟಕ್ಕೆ ಬಳಸೋ ಜಿಲೆಟಿನ್ನ್ನು ಯುವಕ ಕಟ್ಟಿಕೊಂಡು ಬಂದು, ಯುವತಿಯ ಮನೆ ಮುಂದೆ ಸ್ಫೋಟಿಸಿದ್ದಾನೆ.
ಜಿಲೆಟಿನ್ ಸ್ಫೋಟಕ್ಕೆ ಯುವಕನ ದೇಹ ಪೀಸ್ ಪೀಸ್ ಆಗಿದೆ. ಕಳೆದ ವರ್ಷ ಯುವಕ ಅಪ್ರಾಪ್ತ ಪ್ರೇಮಿ ಜೊತೆ ಎಸ್ಕೇಪ್ ಆಗಿದ್ದ. ನಂತರ ಪೊಲೀಸರು ಯುವಕನನ್ನು ಬಂಧಿಸಿ ಪೋಸ್ಕೋ ಕೇಸ್ ಹಾಕಿದ್ರು. ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನ್ಯೂ ಇಯರ್ ಸೆಲೆಬ್ರೇಷನ್ಗೆ ಪ್ಲಾನ್ – ಬೆಂಗಳೂರು ಪೊಲೀಸರು ಫುಲ್ ಅಲರ್ಟ್..!
Post Views: 346