Download Our App

Follow us

Home » ಮೆಟ್ರೋ » ಲಕ್ಷ ಲಕ್ಷ ಭಕ್ತರಿಗೆ ನಿರಾಸೆ.. ಇತಿಹಾಸದಲ್ಲಿ 3ನೇ ಬಾರಿ ಗವಿಗಂಗಾಧರನಿಗೆ ನಮಸ್ಕರಿಸದ ಭಾಸ್ಕರ..!

ಲಕ್ಷ ಲಕ್ಷ ಭಕ್ತರಿಗೆ ನಿರಾಸೆ.. ಇತಿಹಾಸದಲ್ಲಿ 3ನೇ ಬಾರಿ ಗವಿಗಂಗಾಧರನಿಗೆ ನಮಸ್ಕರಿಸದ ಭಾಸ್ಕರ..!

ಬೆಂಗಳೂರು : ನಾಡಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿದೆ. ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ ಈ ಬಾರಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿಲ್ಲ. ಇದರಿಂದ ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.

ಮಕರ ಸಂಕ್ರಾಂತಿ ಪ್ರಯುಕ್ತ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ನಡೆಯುತ್ತಿದ್ದವು. ಸೂರ್ಯ ದಕ್ಷಿಣಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಸೂರ್ಯ ಕಿರಣವು ಸಂಜೆ 5.14 ರಿಂದ 5.17 ರ ಅವಧಿಯಲ್ಲಿ ಶಿವ ಲಿಂಗವನ್ನು ಸ್ಪರ್ಶಿಸಬೇಕಿತ್ತು. ಆದರೆ ಇಂದು ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಇದ್ದುದರಿಂದ ಗವಿಗಂಗಾಧರನಿಗೆ ಭಾಸ್ಕರ ನಮಸ್ಕರಿಸಲಿಲ್ಲ.

ಸೂರ್ಯರಶ್ಮಿ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಭಕ್ತರು ಕಾಯುತ್ತಿದ್ದರು. ಹೀಗಾಗಿ ಭಕ್ತರಿಗಾಗಿ LED ಸ್ಕ್ರೀನ್ ಕೂಡ ಹಾಕಲಾಗಿತ್ತು. ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಸಾವಿರಾರು ಭಕ್ತರಿಗೆ ನಿರಾಸೆಯಾಗಿದೆ.

ಇದನ್ನೂ ಓದಿ : ಅಂದು ಅಶೋಕ್​ಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಸಂಚು – ಇಂದು ಮುನಿರತ್ನ ಜೊತೆಗೇ ಅಶೋಕ್ ಕುಶಲೋಪರಿ..!

Leave a Comment

DG Ad

RELATED LATEST NEWS

Top Headlines

“ಎಕ್ಕ” ಚಿತ್ರಕ್ಕೆ ನಾಯಕಿಯಾದ ಸಲಗ ಬ್ಯೂಟಿ… ಯುವರಾಜ್ ಕುಮಾರ್​ಗೆ ಸಂಜನಾ ಆನಂದ್ ಜೋಡಿ..!

ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ರೋಹಿತ್ ಪದಕಿ ಸಾರಥ್ಯದ, ಎಕ್ಕ ಸಿನಿಮಾ ಜೂನ್ 6ಕ್ಕೆ ತೆರೆಗೆ ಬರಲಿದ್ದು, ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರತಂಡ

Live Cricket

Add Your Heading Text Here