ಚಿತ್ರದುರ್ಗ : ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಆಂಧ್ರ ಕಳ್ಳರು ಪೊಲೀಸ್ ಜೀಪ್ ಮೇಲೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಪೊಲೀಸರು ಏರ್ ಫೈರ್ ಮಾಡಿದರೂ ಕಳ್ಳರ ಗ್ಯಾಂಗ್ ಜಗ್ಗದೆ ತಪ್ಪಿಸಿಕೊಂಡಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ಕಳ್ಳರನ್ನು ಹಿಡಿಯಲು ಪೊಲೀಸರು ಬೊಲೆರೋ ವಾಹನವನ್ನು ಅಡ್ಡ ಹಾಕಿದ್ದರು. ಈ ವೇಳೆ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಏಕಾಏಕಿ ಕಳ್ಳರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಮಾಡಿದ್ದಾರೆ. ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸ್ ಜೀಪಿನ ಗ್ಲಾಸ್ ಡ್ಯಾಮೇಜ್ ಆಗಿದ್ದು, ಕಳ್ಳರು ಬಂದಿದ್ದ ವಾಹನ ಹಿಂಬಾಲಿಸಿ ಹಿಡಿಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ನಾಯಕನಹಟ್ಟಿಯಿಂದ ಬೋಸೇ ದೇವರಹಟ್ಟಿ ಕಡೆ ಹೋಗಿದ್ದ ಗ್ಯಾಂಗ್, ಬೊಸೇದೇವರಹಟ್ಟಿ, ಕೋಟೆನಗರ ಒಳ ಮಾರ್ಗದಲ್ಲಿ ಕುದಾಪುರಕ್ಕೆ ಬರ್ತಿತ್ತು. ಈ ವೇಳೆ ನಾಯಕನಹಟ್ಟಿ ಠಾಣೆ PSI ಶಿವಕುಮಾರ್ ಟೀಂ ನಿಂದ ಕಳ್ಳರನ್ನ ಹಿಡಿಯಲು ಯತ್ನಿಸಿದ್ದಾರೆ. ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಪೊಲೀಸರು, ಕಳ್ಳರ ನಡುವಿನ ಪೈಟ್ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವರು ಸ್ಥಳೀಯರಿಂದ ಘಟನೆಯ ವಿವರ ಪಡೆದಿದ್ದಾರೆ.
ಇದನ್ನೂ ಓದಿ : ಭಾರ್ಗವ್ ಕೃಷ್ಣ ಅಭಿನಯದ “ಓಂ ಶಿವಂ” ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ – ಸಿನಿಮಾ ಆಗಸ್ಟ್ನಲ್ಲಿ ತೆರೆಗೆ..!