Download Our App

Follow us

Home » ಸಿನಿಮಾ » ‘ಗೇಮ್ ಚೇಂಜರ್’ ಟ್ರೇಲರ್ ರಿಲೀಸ್.. ಕನ್ನಡದಲ್ಲಿಯೂ ಬಿಡುಗಡೆಯಾಗ್ತಿದೆ ರಾಮ್ ಚರಣ್ ಸಿನಿಮಾ..!

‘ಗೇಮ್ ಚೇಂಜರ್’ ಟ್ರೇಲರ್ ರಿಲೀಸ್.. ಕನ್ನಡದಲ್ಲಿಯೂ ಬಿಡುಗಡೆಯಾಗ್ತಿದೆ ರಾಮ್ ಚರಣ್ ಸಿನಿಮಾ..!

ಗ್ಲೋಬಲ್ ಸ್ಟಾರ್ ರಾಮ್​ ಚರಣ್ ಹಾಗೂ ಆರ್.ಶಂಕರ್ ಕಾಂಬಿನೇಷನ್ ‘ಗೇಮ್ ಚೇಂಜರ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಹೈದ್ರಾಬಾದ್ ನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನಡೆದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ನಿರ್ದೇಶಕ ರಾಜಮೌಳಿ ವಿಶೇಷ ಅಥಿತಿಯಾಗಿ ಆಗಮಿಸಿದ್ದರು. ‘ಗೇಮ್ ಚೇಂಜರ್’ ಟ್ರೇಲರ್ ರಿಲೀಸ್ ಮಾಡಿ ಜಕ್ಕಣ್ಣ ಇಡೀ ತಂಡಕ್ಕೆ ಶುಭಾಷಯ ತಿಳಿಸಿದರು.

2 ನಿಮಿಷ 40 ಸೆಕೆಂಡ್ ಗಳಿರುವ ಗೇಮ್ ಚೇಂಜರ್ ಟ್ರೇಲರ್​ನಲ್ಲಿ ರಾಮ್ ಚರಣ್ ಡಬಲ್ ರೋಲ್​ನಲ್ಲಿ ಅಬ್ಬರಿಸಿದ್ದಾರೆ. ಒಮ್ಮೆ ರಾಜಕಾರಣಿ ಪಾತ್ರದಲ್ಲಿ, ಇನ್ನೊಂದು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ರಾಜಕೀಯದಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ರಾಮ್ ಹೇಗೆಲ್ಲಾ ಹೋರಾಟ ಮಾಡ್ತಾರೆ ಅನ್ನೋದನ್ನು ಟ್ರೇಲರ್​ನಲ್ಲಿ ಕಟ್ಟಿಕೊಡಲಾಗಿದೆ. ಇದರೊಂದಿಗೆ ಆಕ್ಷನ್ ದೃಶ್ಯಗಳು ಅಬ್ಬರಿಸಿರುವ ‘ಚೆರ್ರಿ’ಗೆ ಜೋಡಿಯಾಗಿ ನಟಿ ಕಿಯಾರಾ ಅಡ್ವಾಣಿ ಮಿಂಚಿದ್ದಾರೆ.

‘ಆರ್‌ಆರ್‌ಆರ್’ ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ ‘ಗೇಮ್‌ ಚೇಂಜರ್’ ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ‘ಗೇಮ್ ಚೇಂಜರ್’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಮ್, ಕಿಯಾರಾ ಅಡ್ವಾಣಿ ಜೊತೆಗೆ ಅಂಜಲಿ, ಎಸ್.ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.

ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ಎಸ್.ಯು.ವೆಂಕಟೇಶನ್ ಮತ್ತು ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಚಿತ್ರದ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಸ್ ತಿರುನಾವುಕ್ಕರಸು ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಅವಿನಾಶ್ ಕೊಲ್ಲಾ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದು, ಅನ್ಬೀರವ್ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದು, ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ಬಾಸ್ಕೊ ಮಾರ್ಟಿನ್, ಜಾನಿ ಮತ್ತು ಸ್ಯಾಂಡಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವು ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಜನವರಿ 10, 2025 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಮದುವೆ ಸಂಭ್ರಮದಲ್ಲಿ ತನ್ನೂರಿನ ಶಾಲೆಗೆ ಹೈಟೆಕ್‌ ಸ್ಪರ್ಶ ಕೊಡಿಸಿದ ನಟ ಡಾಲಿ ಧನಂಜಯ್​..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ಬಿಗ್​ ಶಾಕ್​.. ಶುರುವಾಯ್ತು ‘ಜಾಮೀನು’ ಸಂಕಷ್ಟ – ಬೇಲ್​ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಪೊಲೀಸರು!

ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್​ಗೆ ಬಿಗ್ ಶಾಕ್​ ಎದುರಾಗಿದೆ. ದರ್ಶನ್​​ ಮತ್ತೆ ಜೈಲಿಗೆ ಹೋಗೋದು ಫಿಕ್ಸ್ ಎನ್ನಲಾಗ್ತಿದೆ. ‘ದಾಸ’ನಿಗೆ ಹೈಕೋರ್ಟ್​ ನೀಡಿರುವ ರೆಗ್ಯುಲರ್

Live Cricket

Add Your Heading Text Here