Download Our App

Follow us

Home » ಅಪರಾಧ » ದರ್ಶನ್​​ನ ಕೋರ್ಟ್​ಗೆ​​ ಕರೆದೊಯ್ಯೋ ರೂಟ್​ನಲ್ಲಿ ಫುಲ್​​ ಟೈಟ್ ಸೆಕ್ಯೂರಿಟಿ..!

ದರ್ಶನ್​​ನ ಕೋರ್ಟ್​ಗೆ​​ ಕರೆದೊಯ್ಯೋ ರೂಟ್​ನಲ್ಲಿ ಫುಲ್​​ ಟೈಟ್ ಸೆಕ್ಯೂರಿಟಿ..!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ​ ಅರೆಸ್ಟ್ ಆಗಿರುವ ಆರೋಪಿ ದರ್ಶನ್​ಗೆ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಿದೆ. ಈ ಹಿನ್ನೆಲೆ ದರ್ಶನ್​​ ಸೇರಿ ನಾಲ್ವರು ಆರೋಪಿಗಳನ್ನು ಇಂದು ಮಧ್ನಾಹ್ಯ 3 ಗಂಟೆ ನಂತರ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ದರ್ಶನ್​​ನ್ನು ತನಿಖಾ ತಂಡ 13 ದಿನ, 312 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, 13 ವರ್ಷಗಳ ನಂತರ ಡಿ ಬಾಸ್ ಮತ್ತೆ ಜೈಲು ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆ ದರ್ಶನ್​​ನ್ನು ಕೋರ್ಟ್​ಗೆ​​ ಕರೆದೊಯ್ಯೋ ರೂಟ್​ನಲ್ಲಿ ಫುಲ್​​ ಟೈಟ್​ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಕೋರ್ಟ್​ವರೆಗೆ ಸೆಕ್ಯೂರಿಟಿ ವ್ಯವಸ್ಥೆಯಿದ್ದು, ಕೋರ್ಟ್​ನಿಂದ ಪರಪ್ಪನ ಅಗ್ರಹಾರ ಜೈಲಿನವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಜೈಲಿನ ಬಳಿಯೂ ದರ್ಶನ್​ಗೆ ಪೊಲೀಸ್​ ಭದ್ರಕೋಟೆಯಿದ್ದು, ಅಭಿಮಾನಿಗಳು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ KSRP ಪೊಲೀಸ್ ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ನ್ಯಾಯಾಂಗ ಬಂಧನ ವಿಧಿಸಿದ್ರೆ ಜೈಲಿಗೆ ಕರೆದೊಯ್ಯುವಾಗಲೂ ಸೆಕ್ಯೂರಿಟಿಯಿದೆ. ಒಂದ್ವೇಳೆ ಜೈಲಿಗೆ ಹೋದ್ರೆ ದರ್ಶನ್​​ಗೆ ಪ್ರತ್ಯೇಕ ಬ್ಯಾರಕ್​​​​ ವ್ಯವಸ್ಥೆಯಿದೆ. ಜೈಲಿನಲ್ಲೂ ದರ್ಶನ್​​ ವಿರೋಧಿಗಳಿರೋ ಸಾಧ್ಯತೆಯಿದ್ದು, ಎಲ್ಲಾ ಕಡೆ ಸೂಕ್ತ ಭದ್ರತೆಗೆ ಪೊಲೀಸ್ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ದರ್ಶನ್​​ಗೆ 70 ಲಕ್ಷ ಕೊಟ್ಟಿದ್ದ ಮಾಜಿ ಡೆಪ್ಯುಟಿ ಮೇಯರ್​​ಗಾಗಿ ಪೊಲೀಸರ ಹುಡುಕಾಟ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here