ಬೆಂಗಳೂರು : ಪೋಷಕರ ಆಸೆಯನ್ನೇ ಬಂಡವಾಳ ಮಾಡ್ಕೊಂಡು ರಿಯಾಲಿಟಿ ಶೋ ಹೆಸರಲ್ಲಿ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಕ್ಕಳಿಗೆ ನೆಟ್ ಫ್ಲಿಕ್ಸ್ , ಅಮೆಜಾನ್ನ ಆ್ಯಡ್ನಲ್ಲಿ ನಟನೆ ಮಾಡಿಸ್ತೀವಿ ಅಂತಾ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕೋರಮಂಗಲ ಬಳಿ ಇರೋ ಆರ್ಎಎಸ್ ಮೆಡಿಯಾ ಎಂಟರ್ಟೇನ್ಮೆಂಟ್ ಪ್ರೈವೈಟ್ ಲಿಮಿಟೆಡ್ ಮಕ್ಕಳಿಗೆ ಫೋಟೋ ಶೂಟ್ ಮಾಡಿಸ್ತೀವಿ. ಖಾಸಗಿ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಚಾನ್ಸ್ ಕೊಡಿಸ್ತೀವಿ ಅಂತಾ ಹೇಳಿ ಹಲವು ಪೋಷಕರಿಂದ ಸಾವಿರಾರು ಹಣ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ವಿವೇಕ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಬಂಧ ವಿವೇಕ ನಗರ ಠಾಣೆಗೆ 30ಕ್ಕೂ ಹೆಚ್ಚು ಪೋಷಕರು ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನೂರಾರು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಾದ ಹಿರಿಯ ಪೊಲೀಸ್ ಅಧಿಕಾರಿ..!
Post Views: 40