Download Our App

Follow us

Home » ಅಪರಾಧ » KAS ಸೇರಿ ವಿವಿಧ ಎಕ್ಸಾಮ್​ಗಳಲ್ಲಿ ಪಾಸ್ ಮಾಡಿಸೋದಾಗಿ ಲಕ್ಷ-ಲಕ್ಷ ವಂಚನೆ.. ಟಿಕೆಟ್ ಇನ್ಸ್‌ಪೆಕ್ಟರ್‌ ಬಂಧನ..!

KAS ಸೇರಿ ವಿವಿಧ ಎಕ್ಸಾಮ್​ಗಳಲ್ಲಿ ಪಾಸ್ ಮಾಡಿಸೋದಾಗಿ ಲಕ್ಷ-ಲಕ್ಷ ವಂಚನೆ.. ಟಿಕೆಟ್ ಇನ್ಸ್‌ಪೆಕ್ಟರ್‌ ಬಂಧನ..!

ಬೆಂಗಳೂರು : ಕೆಎಎಸ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಪಾಸ್ ಮಾಡಿಸೋದಾಗಿ ಸ್ಪರ್ಧಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿಕೆಟ್ ಇನ್ಸ್‌ಪೆಕ್ಟರ್‌ ಗೋವಿಂದರಾಜು ಬಂಧಿತ ಆರೋಪಿ.

ಆರೋಪಿ ಗೋವಿಂದರಾಜು ಮೆಜೆಸ್ಟಿಕ್ ರೈಲ್ವೆ ‌ನಿಲ್ದಾಣದಲ್ಲಿ ಟಿಕೆಟ್ ಇನ್ಸ್‌ಪೆಕ್ಟರ್‌ ಉದ್ಯೋಗಿಯಾಗಿದ್ದ. ಈತ ಕೆಎಎಸ್, ಪಿಡಿಒ, ಪಿಎಸ್​ಐ, ಎಫ್​ಡಿಎ ಸೇರಿದಂತೆ ವಿವಿಧ ಎಕ್ಸಾಮ್​ಗಳಲ್ಲಿ ಪಾಸ್ ಮಾಡಿಸೋದಾಗಿ ನಂಬಿಸಿ ವಿದ್ಯಾರ್ಥಿಗಳಿಂದ PDO ಹುದ್ದೆಗೆ 25 ಲಕ್ಷ, ಕೆಎಎಸ್ ಪ್ರೀಲಿಮ್ಸ್​​ಗೆ 50 ಲಕ್ಷದಂತೆ ಹಣ ವಸೂಲಿ ಮಾಡಿದ್ದ.

ಆರೋಪಿ ಮೊಬೈಲ್​ನಲ್ಲಿ 40ಕ್ಕೂ ಹೆಚ್ಚು ಸ್ಪರ್ಧಾಕಾಂಕ್ಷಿಗಳ ಮೊಬೈಲ್ ನಂಬರ್, ಚೆಕ್​ಗಳು ಪತ್ತೆಯಾಗಿದ್ದು, ಉತ್ತರ ಗೊತ್ತಿರೋದನ್ನು ಬರೆದು ಉಳಿಕೆ ಖಾಲಿ ಬಿಟ್ಟು ಬರುವಂತೆ ಸ್ಪರ್ಧಾಕಾಂಕ್ಷಿಗಳಿಂದ ಸೂಚಿಸ್ತಿದ್ದ. ಸ್ಪರ್ಧಾಕಾಂಕ್ಷಿಗಳು ಆರೋಪಿ ಗೋವಿಂದರಾಜು ಮಾತು ನಂಬಿ ಲಕ್ಷಾಂತರ ರೂ. ಹಣ ನೀಡಿದ್ದರು. ಸದ್ಯ ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗದ ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ವಂಚನೆ – ವರ್ತೂರು ಆಪ್ತೆ ಶ್ವೇತಾಗೌಡ ವಿರುದ್ಧ ಮತ್ತೊಂದು FIR..!

Leave a Comment

DG Ad

RELATED LATEST NEWS

Top Headlines

ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ

Live Cricket

Add Your Heading Text Here