ಬೆಂಗಳೂರು : ನಿವೃತ್ತ ಪೊಲೀಸ್ ಅಧಿಕಾರಿ ಮನೆ ದೋಚಿದ್ದ ನಾಲ್ವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಣಿಕಂಠ@ ಕಳ್ಳಮಣಿ, ದೀಕ್ಷಿತ್, ಅಜಯ್, ಕೀರ್ತಿ ಬಂಧಿತ ಆರೋಪಿಗಳಾಗಿದ್ದಾರೆ.
ಮಾರ್ಚ್ 5ರಂದು ಮನೆಗಳವು ಪ್ರಕರಣ ದಾಖಲಾಗಿದ್ದು, ಏಪ್ರಿಲ್ 27ರಂದು ಲಗ್ಗೆರೆ ಬಳಿ ಗಸ್ತಿನಲ್ಲಿದ್ದ ಪೊಲೀಸರು ಕೆಲವರ ವಿಚಾರಣೆ ಮಾಡಿದ್ದರು. ದೀಕ್ಷಿತ್, ಅಜಯ್ ವಿಚಾರಣೆ ಮಾಡಿದಾಗ ಜೇಬಿನಲ್ಲಿ ಬೆಳ್ಳಿ ವಸ್ತು ಸಿಕ್ಕಿದ್ದವು. ಹೆಚ್ಚಿನ ವಿಚಾರಣೆ ವೇಳೆ ನಿವೃತ್ತ ಪೊಲೀಸ್ ಮನೆಯಲ್ಲಿ ಕದ್ದಿದ್ದನ್ನು ಒಪ್ಪಿಕೊಂಡಿದ್ದರು. ಮಣಿಕಂಠ ಎಂಬ ಆರೋಪಿ ರೌಡಿ ಚಟುವಟಿಕೆ ಸೇರಿ ಮನೆಗಳ್ಳತನದಲ್ಲಿ ಈ ಹಿಂದೆ ಅರೆಸ್ಟ್ ಆಗಿದ್ದ.
ಆರೋಪಿಗಳಿಂದ 470 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, 50 ಸಾವಿರ ಹಣ ಸೇರಿ 28 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ‘ರಾಮಾಯಣ’ ಚಿತ್ರಕ್ಕಾಗಿ ಒಂದಾದ ರಾಕಿಭಾಯ್-ನಮಿತ್ ಮಲ್ಹೋತ್ರಾ…!
Post Views: 230