Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಕೊಲೆ ಕೇಸ್​ – ವಿಚಾರಣೆಗೆ ಹಾಜರಾದ ಮಾಜಿ ಉಪಮೇಯರ್ ಮೋಹನ್​ ರಾಜ್..!

ರೇಣುಕಾಸ್ವಾಮಿ ಕೊಲೆ ಕೇಸ್​ – ವಿಚಾರಣೆಗೆ ಹಾಜರಾದ ಮಾಜಿ ಉಪಮೇಯರ್ ಮೋಹನ್​ ರಾಜ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ಗೆ ಮತ್ತೆ 14ದಿನ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ದರ್ಶನ್ ಅವರಿಗೆ 40 ಲಕ್ಷ ರೂಪಾಯಿ ಹಣ ಕೊಟ್ಟ ಆರೋಪ ಎದುರಿಸುತ್ತಿದ್ದ ಮೋಹನ್ ರಾಜ್ ಅವರು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.

ಚಿತ್ರರ್ದುಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ ಪೊಲೀಸ್​ ಅಧಿಕಾರಿಗಳು ಎಲ್ಲ ರೀತಿಯ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಈ ಕೊಲೆ ಕೇಸ್​ ಅನ್ನು ಮುಚ್ಚಿ ಹಾಕಲು ನಟ ದರ್ಶನ್​ಗೆ ಮೋಹನ್​ ರಾಜ್​ ಎಂಬುವವರು ಹಣ ನೀಡಿದ್ದರು ಅನ್ನೋ ಮಾಹಿತಿ ಕೇಳಿ ಬಂದಿದೆ. ಇದೀಗ ಹಣ ನೀಡಿದ್ದಕ್ಕೆ ಮಾಜಿ ಉಪಮೇಯರ್ ಮೋಹನ್​ರಾಜ್ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿ ನೋಟಿಸ್ ಜಾರಿ ಮಾಡಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕಾಗಿ ನಟ ದರ್ಶನ್​ಗೆ ಮೋಹನ್​ ರಾಜ್​ ಅವರು 40 ಲಕ್ಷ ರೂಪಾಯಿ ಹಣ ನೀಡಿದ್ದರು. ಹೀಗಾಗಿ ಮೋಹನ್​ ರಾಜ್​ ಅವರು ಪೊಲೀಸರು ನೋಟಿಸ್​ ಕೊಟ್ಟ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ : ದಾವಣಗೆರೆಯಲ್ಲಿ ದೇವರನ್ನೇ ಕದ್ದೊಯ್ದ ಕಳ್ಳರು : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ..!

Leave a Comment

DG Ad

RELATED LATEST NEWS

Top Headlines

ದಶಕದ ಬಳಿಕ ಟೀಂ ಇಂಡಿಯಾ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ..!

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಭಾರತದ ವಿರುದ್ಧದ 5ನೇ ಟೆಸ್ಟ್​ ಪಂದ್ಯದಲ್ಲಿಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಆಸೀಸ್ ಪಡೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 3-1

Live Cricket

Add Your Heading Text Here