Download Our App

Follow us

Home » ಅಪರಾಧ » ಏರ್​ಪೋರ್ಟ್ ನಲ್ಲಿ ಮಹಿಳಾ ಪೋಡಿಯಂಗೆ ನುಗ್ಗಿದ ವಿದೇಶಿ ಪ್ರಜೆ : ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ..!

ಏರ್​ಪೋರ್ಟ್ ನಲ್ಲಿ ಮಹಿಳಾ ಪೋಡಿಯಂಗೆ ನುಗ್ಗಿದ ವಿದೇಶಿ ಪ್ರಜೆ : ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ..!

ಬೆಂಗಳೂರು : ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಮಹಿಳಾ ಪೋಡಿಯಂಗೆ ನುಗ್ಗಿದ ವಿದೇಶಿ ಪ್ರಜೆಯನ್ನು ಪ್ರಶ್ನಿಸಿದಕ್ಕೆ ವಿದೇಶಿ ಪ್ರಜೆ ಪುಂಡಾಟ ನಡೆಸಿದ್ದಾನೆ. ಏರ್ ಪೋರ್ಟ್ ನಲ್ಲಿ ತಪಾಸಣೆ ವೇಳೆ ವಿದೇಶಿ ಪ್ರಜೆಯೊಬ್ಬ ಮಹಿಳಾ ಎನ್ಕ್ಲೋಷರ್​​ಗೆ ನುಗ್ಗಿದ್ದಾನೆ.

ಹಾಗಾಗಿ ವಿದೇಶಿ ಪ್ರಜೆಯನ್ನ ಭದ್ರತಾ ಸಿಬ್ಬಂದಿ ಹಿಡಿದು ಪ್ರಶ್ನಿಸಿದ್ದಾರೆ, ಈ ವೇಳೆ ವಿದೇಶಿ ಪ್ರಜೆ ಭದ್ರತಾ ಸಿಬ್ಬಂದಿ ಮೇಲೆ‌ ಬಿದ್ದಿದ್ದಾನೆ. ಭದ್ರತಾ ಸಿಬ್ಬಂದಿಯನ್ನ ತಳ್ಳಾಡಿ ಹಲ್ಲೆಗೆ ಯತ್ನಿಸಿದ್ದಾನೆ.

ಜಿಂಬಾಂಬ್ವೆ ಮೂಲದ ಪ್ರಜೆ ರುಕುಡ್ಸೋ ಚಿರಿಕುವಾರಾರ ಎಂಬ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 354 ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ : ಕಲಬುರಗಿ : ವಿವಿ ಗ್ರಂಥಾಲಯದಲ್ಲಿ ಸರಸ್ವತಿ ಪೂಜೆಗೆ ವಿದ್ಯಾರ್ಥಿಯಿಂದ ವಿರೋಧ..!

Leave a Comment

DG Ad

RELATED LATEST NEWS

Top Headlines

ಯಾಕಮ್ಮಾ ಬಿಗ್​​ಬಾಸ್​ ಮನೆಯಲ್ಲಿದ್ಯಾ? ಹೊರಡಮ್ಮಾ ಮನೆಗೆ – ಚೈತ್ರಾಗೆ ಟಾಂಗ್ ಕೊಟ್ಟ ರಜತ್..!

ಬಿಗ್​​ಬಾಸ್​​ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಪ್ರತಿ ವಾರದಂತೆ ಈ ವಾರ ಕೂಡ ಬಿಗ್​ಬಾಸ್​ ನಾಮಿನೇಷನ್​ ಪ್ರಕ್ರಿಯೆ ವಿಭಿನ್ನವಾಗಿ

Live Cricket

Add Your Heading Text Here